ಮಗ್ಗಲು ಮಾರಿ..!
ಮಗ್ಗಲು ಮಾರಿ..!
![]() |
| Credit:- pinterest.com |
©All Rights reserved by Myunsungpoetry.blogspot.com
Ref no :- MUP/01012023/29
Ref no :- MUP/01012023/29
**************************************
ಮಗ್ಗಲು ಮಾರಿ
ನರವ್ಯೂಹದೊಳು ಸೇರಿ,
ಗದ್ದಲಕೊಳಮಾಡಿದೆ ನೂರು-ಬಾರಿ,
ಕಾಣದ ತೀರಕ್ಕೆ ಕರೆಯೋಲೆ ತೋರಿ,
ನಮ್ಮೆಲ್ಲರ ತಲೆಯೋಳು ತೂರಿ-ತೂರಿ,
ಮೊಬೈಲ್ ಎಂಬ ಮಗ್ಗಲು ಮಾರಿ..!
ಯುವಜನತೆ ತೋರದೆ ದಾರಿ,
ಬಿದ್ದಿಹರು ಅಂತರ್ಜಾಲದೊಳು ಕಾಲುಜಾರಿ..!
ಬೆನ್ನತ್ತ ಬೇತಾಳದಂತೆ ಹೆಗಲ ಮೇಲೇರಿ,
ಸಂಬಂಧ ಬರಿದುಮಾಡಿದ ಕ್ರೂರಿ,
ಮೊಬೈಲ್ ಎಂಬ ಮಗ್ಗಲು ಮಾರಿ..!
ಆಲದ ಮರದಂತೆ ಕೈಯೋಳು ಬೇರೂರಿ,
ಅರಿದು ಮೋರಿಸೇರುತ್ತಿದೆ ಸೃಜನತೆ ಸೋರಿ,
ಹೊರಟಿದೆ ಕಾಲ್ಪನಿಕ ಲೋಕದೋಳು ಮನಸನು ಮಾರಿ,
ಮಾನವನೇ,,, ನೀ ಸೃಷ್ಟಿಸಿದ ಹೆಮ್ಮಾರಿ,
ಮೊಬೈಲ್ ಎಂಬ ಮಗ್ಗಲು ಮಾರಿ..!
✍️ಕೀ.ಕೆ
ಬೆಂಗಳೂರು
***************************************
Please contact through,
E-mail- keerthankeeru2001@gmail.com
Ph No.- 9743104743


Comments