Posts

Showing posts with the label Nature love

ಮಗ್ಗಲು ಮಾರಿ..!

Image
  ಮಗ್ಗಲು ಮಾರಿ..! Credit:- pinterest.com ©All Rights reserved by  Myunsungpoetry.blogspot.com Ref no :- MUP/01012023/29 ************************************** ಮ ಗ್ಗಲು ಮಾರಿ ನರವ್ಯೂಹದೊಳು ಸೇರಿ, ಗದ್ದಲಕೊಳಮಾಡಿದೆ ನೂರು-ಬಾರಿ, ಕಾಣದ ತೀರಕ್ಕೆ ಕರೆಯೋಲೆ ತೋರಿ, ನಮ್ಮೆಲ್ಲರ ತಲೆಯೋಳು ತೂರಿ-ತೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಯುವಜನತೆ ತೋರದೆ ದಾರಿ, ಬಿದ್ದಿಹರು ಅಂತರ್ಜಾಲದೊಳು ಕಾಲುಜಾರಿ..! ಬೆನ್ನತ್ತ ಬೇತಾಳದಂತೆ ಹೆಗಲ ಮೇಲೇರಿ, ಸಂಬಂಧ ಬರಿದುಮಾಡಿದ ಕ್ರೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಆಲದ ಮರದಂತೆ ಕೈಯೋಳು ಬೇರೂರಿ, ಅರಿದು ಮೋರಿಸೇರುತ್ತಿದೆ ಸೃಜನತೆ ಸೋರಿ, ಹೊರಟಿದೆ ಕಾಲ್ಪನಿಕ ಲೋಕದೋಳು ಮನಸನು ಮಾರಿ, ಮಾನವನೇ,,, ನೀ ಸೃಷ್ಟಿಸಿದ ಹೆಮ್ಮಾರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮರಳಿಬಾರದ..... ಮನ ಅಳಿಸದ ಸುಂದರ ಸವಿ ನೆನಪುಗಳು.....

Image
ಮರಳಿಬಾರದ.....     ಮನ ಅಳಿಸದ   ಸುಂದರ ಸವಿ ನೆನಪುಗಳು.... **************************************** ©All Rights reserved by  Myunsungpoetry.blogspot.com Ref no :- MUP/09082022/19 **************************************** ಹು ಣ್ಣಿಮೆಯ ರಾತ್ರಿಯಲಿ  ಪೂರ್ಣ ಚಂದಿರನ ಸುಂದರ ಬೆಳದಿಂಗಳಲಿ ತಂಗಾಳಿ ತಣ್ಣನೆ ಬೀಸಿ ಮೈ ಸೋಕಿದ ಹಾಗೆ  ಮನಃಶಾಂತಿ ತುಂಬಿದ ಹೃದಯ  ವೇದನೆ ಅರಿಯದ ಚಿತ್ತ  ತೊದಲ ನುಡಿಗಳು  ಮೊಗದಲಿ ನಗುವನ್ನೇ ಆಭರಣವಾಗಿ ತೊಟ್ಟಿದ್ದ  ಬಾಲ್ಯದ ಆ ಮಧುರ ಕ್ಷಣಗಳು ನೆನಪಾಗಿ ಮೈ ರೋಮಾಂಚನವಾಗಿ ಮನ ಹಾಯಾಗಿರಲು..... ಅಮ್ಮನು ಆಡಿದ ಜೋಗುಳ  ಅಪ್ಪನ ಹೆಗಲೇರಿದ ಆ ದಿನಗಳ ಬಾನಿನಲ್ಲಿ ಚಂದಮಾಮನ ಕಂಡು ಸವಿ ಮಾತಿಗಾಗಿ ಕಾತುರ  ಶಶಿಯು ಧರೆಗೆ ಇಳಿಯಲಾರ ಎಂಬ ಬೇಸರ  ತಾರೆಗಳ ಎಣಿಸುವ ಸಡಗರ ಎಣಿಸಲಾಗದೆ ಓಡಿ ಸರಸರ  ಅಜ್ಜಿಯ ಮಡಿಲೇರಿ ಕೇಳಿದ ಕಥೆಗಳ ಸಾರ  ಗಾನದಂತೆ ಇಂದಿಗೂ ಸುಮಧುರ  ಪುನಃ ಪಿಸು ಮಾತಿನಂತೆ ಕಿವಿಯಲಿ ಇಂಪಾಗಿರಲು..... ಸವಿ ಸವಿ ಸಾವಿರ ಸ್ಮೃತಿ ಕಾಮನಬಿಲ್ಲಂತೆ ಮೂಡಿರಲು ಮನ ನಲಿದಾಡಿ ಸುರಲೋಕಕ್ಕೆ ಜಾರಿದ ಭಾಸ  ನೆನಪಲ್ಲೇ ನೆನಪನ್ನು ಮುದ್ದಿಸಿ ನೆನಪೆಂದು ನೆನೆದು ಮೊಗದಲಿ ಮುಗುಳ್ನಗೆ ಆವರಿಸಿರಲು  ಮರಳಿಬಾರದ,,, ಮನ ಅಳಿಸದ,, ಸುಂದರ ಸವಿ ನೆನಪುಗಳು  ಮಂದಹಾಸ ಹ...

ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ..!

Image
ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ.. ************************************** ** ಹೇ ಹೃದಯವೇ  ಏಕೆ ಕೊಲ್ಲುವೆ ನನ್ನನ್ನಾ  ಪ್ರತಿ ಕ್ಷಣ ಮಾಡಿ ಅವನ ನೆನಪನ್ನಾ ಬೇಕಾದರೇ ನಿಲ್ಲಿಸಿಬಿಡು ನಿನ್ನ ಬಡಿತವನ್ನ  ನೆನೆದು ನೆನೆದು ಮಾಡದಿರು ಮನಕೆ ನೋವನ್ನಾ ಹೇ ಹೃದಯವೇ  ನೋಡುವ ಹಂಬಲಕೆ ಸಾಂತ್ವಾನ ಹೇಳದಿರು ಇನ್ನೇನು ಮನದ ನೋವೆ ತಿಳಿಸಿದೆ ಎಲ್ಲವನು ಸಮಾಧಿ ಮಾಡಿ ನಿನ್ನೇಲ್ಲಾ ಭಾವನೆಗಳನು ಅರಿಯದೆ ಹೋದೆಯಾ ಮುಂದಿನ ದಿನಗಳನು... ಹೇ ಹೃದಯವೇ  ನೋವಿನಾ ಪ್ರೀತಿಯ ತಪ್ಪಿಗೆ ಕ್ಷಮಿಸೆನ್ನಾ ತಿಳಿಯದಾದೆನೆ ಪ್ರೀತಿಯ ಮೋಸವನ್ನಾ  ಇಷ್ಟಾದರೂ ನಾ ಮರೆವೆನೆ ಅವನನ್ನಾ  ಜೀವ ಇರುವರೆಗೂ ಪ್ರೀತಿಸುವೆ ನಿನ್ನಲ್ಲೇ ಬಚ್ಚಿಟ್ಟು ನನ್ನ ಇನಿಯನನ್ನಾ..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮನ ಬರಡಾಗಿ ಬೆತ್ತಲಾಗಿದೆ.!

Image
  ಮನ ಬರಡಾಗಿ ಬೆತ್ತಲಾಗಿದೆ.! * ***************************************** ಭಾ ವನೆಗಳ ಜೊತೆಗೂಡಿ.. ಪ್ರಕೃತಿಯೊಡನೆ ನಲಿದಾಡಿ.. ಚಂದಿರನೊಡನೆ ಮುದ್ದಾಡಿ ನೂರಾರು ಪದಗಳ ಕುಡಿ-ಕುಡಿ ಚಿತ್ರಿಸಿ ಅವಳ ವರ್ಣಿಸುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ...! ಸುರಿವ ಮಳೆಯೊಡನೆ ಕುಣಿದಾಡಿ.. ಹೊಳೆವ ನಕ್ಷತ್ರಗಳ ಕಂಡು ನಾಟ್ಯವಾಡಿ.. ತೀರದ ಸಮುದ್ರದಲೆಯಲಿ ತೆಲಾಡಿ.. ಪದಗಳಲೆ ಸರಸವಾಡುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ..! ನೆನಪಿನ ರೆಂಬೆ-ಕೊಂಬೆಯಲಿ ನೇತಾಡಿ.. ಕಗ್ಗತ್ತಲ್ಲಲ್ಲಿ ಬೆಳುಕಿಗಾಗಿ ಹುಡುಕಾಡಿ.. ಪ್ರೀತಿ-ಪ್ರೇಮವೆ ಹೆಚ್ಚೆ0ದು ಕಾದಾಡಿ... ಪ್ರತಿ ಕನಸಲು ಅವಳ ಸ್ಪರ್ಶವ ಹುಡುಕುತ್ತಿದ್ದ ಮನ.. ಬರಡಾಗಿ ಬೆತ್ತಲಾಗಿದೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

Hobbies..

Image
Hobbies.. ******************************************* H obby is just not  A word filled with  five letters  Its a emotion of everyone's world Where some will  be having fear to talk and express their emotions They only express  through their hobby  Even it was through  A writing or a drawing  Or through their own lyrics  But somewhat they  Puts out through  A hobby If someone is tired They find relaxation Through the medicine called Hobby  And even it entertains who views it  Their will be a two  Kinds of people of world one will be the creator of their  Own hobby  Other will be the  Viewer But here both gets  A entertainment  Don't matter how ur Hobby is It only matters  how u takes it  If u continued and took into life It will be ur passion If not it remains as ur Hobby only  But guys don't stop ur hobbies always Be in a touch  With it If u are u will be happy  If no...

ರೆಕ್ಕೆ ಬಡಿಯುತ್ತಿದೆ ಮನಸ್ಸು..!

Image

ಓ ನನ್ನ ಸೂರ್ಯ..!

Image
ಓ ನನ್ನ ಸೂರ್ಯ..! ************************************* ಮು ಸುಕು ಕವಿದಿರುವ ಮನಕೆ ನೀ ಬಂದೆ ಬೆಳಕಾಗಿ, ಹೊಳೆವ ನಿನ್ನಂದಕೆ ಬೆರಗಾದೆ ತಲೆಬಾಗಿ.. ಸುಡುವ ಶಾಖಕೆ ಅಂಜಿ ತುಸು ನಿನ್ನ ತೆಗಳುತ್ತ.. ತೆಗಳುತ್ತ..! ಆದರೆ ನೀ ಹಿಂತಿರುಗುವ ಮುಸ್ಸಂಜೆಯಲಿ ಕಂಡು ಆ ನಿನ್ನಂದ-ಚಂದ, ಕಳೆದೆ ಕಾಲವ,, ಗಳಿಸುತ ಖುಷಿಯ ಆಲಿಸುತ-ಆಲಿಸುತ ಹಕ್ಕಿಗಳ  ಘಾನವ, ನಿನ್ನ ಹೊಗಳುತ್ತ..ಹೋಗಳುತ್ತ..! ನಿನ್ನ ತೇಜಸ್ಸನ್ನು ಹೋಲುವರಾರಿಲ್ಲ ಜಗದಲ್ಲಿ, ನಿನ್ನ ಮುಂದೆ ತೃಣ ಮಾತ್ರ ನಾವಿಲ್ಲಿ...! ಸಕಲ ಜೀವ ಜಂತುಗಳಿಗೆ ನೀನೆ ಆಶ್ರಯ, ನಿನ್ನ ವಿಸ್ಮಯಕ್ಕೆ ಶರಣಾದೆ ಓ ನನ್ನ ಸೂರ್ಯ.. ಸೂರ್ಯ..! ✍️ಮೇಘ  ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743