Posts

Showing posts from March, 2023

ತಂಪಾದ ಸುಡುಬಿಸಿಲು..!

Image
  ತಂಪಾದ ಸುಡುಬಿಸಿಲು..! ©All Rights reserved by  Myunsungpoetry.blogspot.com R ef no :- MUP/21032023/34 ************************************* ಸುಡುತ್ತಿದೆ ನೆತ್ತಿಯ ಆ ಸೂರ್ಯ ಕಿರಣ, ಸಾಗುತ್ತಿದೆ ಹೆತ್ತವರ ನೆನೆದು ಪಯಣ, ಮರೆಸುತ್ತ ಕಹಿ ನೆನಪುಗಳ ಕಥನ, ಉದಯೋನ್ಮುಖ ಭಾವನೆಗೆ ನೀಡುತ್ತ ಜನನ, ಈ ತಂಪಾದ ಸುಡುಬಿಸಿಲು.! ಎತ್ತ ನೋಡಿದರು ಬೆತ್ತಲ ಭೂವಿ, ಗಾಳಿಯ ವೇಗಕ್ಕೆ ಕಿವುಡಾಗಿವೆ ಕಿವಿ, ನೆತ್ತಿಯ ಜಲಪಾತ ಸೃಷ್ಟಿಕರ್ತ ಆ ರವಿ, ನೆನಪಿಗೆ ಕೊಡುಗೆ ನೀಡಿದೆ ಈ ಬೆಟ್ಟದ ಸವಿ, ಈ ತಂಪಾದ ಸುಡುಬಿಸಿಲು..! ಹಾದಿಯೇ ಇಲ್ಲದ ಈ ಕಡುಬೆಟ್ಟದಲ್ಲಿ, ಕಂಡದ್ದು ಬರಿ ಬಂಡೆ-ಕಲ್ಲಿನ ಸಾಮ್ರಾಜ್ಯದ ಬೇಲಿ, ಕೇಳುತ್ತಿರುವುದೊಂದೆ ಪಕ್ಷಿಗಳು ಚಿಲಿಪಿಲಿ,  ಬಿಸಿ ಕಲ್ಲ ಮೇಲೆ ಆಡಿಸುತ್ತಿದೆ ಕಥಕಳ್ಳಿ, ಈ ತಂಪಾದ ಸುಡುಬಿಸಿಲು.! *************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

Image
©All Rights reserved by  Myunsungpoetry.blogspot.com Ref no :- MUP/18032023/33 ************************************** » ನ ಗುತ್ತಲೆ  ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) ನಿನ್ನ ನೋವಿಗೆ ಕಾರಣವೇನು..? ನೀ ಕಾಣದೆ ಕದಡಿದೆ ಏನೋ ಬಾನು..? ನನ್ನ ಭಾವ ಬಯಲ ಮಾಡಲೇನು..? ಅಥವಾ ಮೂಕನಾಗಿ ಮಣ್ಣು ಸೇರಲೇನು..? ದಣಿದು ದಾರಿ ತಪ್ಪಿರುವೆ ನಾನು.? ಇಣುಕದ ತೀರವಾದೆ ಏನೋ ನೀನು..? --------------------------------------------------- ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) --------------------------------------------------- »ಮನದ  ಮಾತಾನೇಕೆ ಮಾಸುವೆ ನನ್ನಲ್ಲಿ.? ನಾ ಪದಗಳ ಸಂಚಾರಿ ಆದನೆ ನಿನ್ನ ಬಾಳಲ್ಲಿ.? ಹೇಳು ಏತಕೆ ನಾ ಕಾದಿರುವೆ ಇಲ್ಲಿ.? ಮನಸೊಂದು ಕರಗಿ ಕೂತಿದೆ ನಿನ್ನಲಿ ..! ನೀ ದೂರದ ಮಾತಾದರೆ ನನ್ನ ಬಾಳಲ್ಲಿ..? ನೇಣು ಬಿಗಿಯಲಿ  ಈ ಕವಿತೆ ನೆನಪಿನ ಕೊಂಬೆಯಲ್ಲಿ.! ನಗುತ್ತಲೆ  ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) **************************************** ✍️ಕೀ.ಕೆ ಬೆಂಗಳೂರು