Posts

Showing posts from July, 2022

ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ..!

Image
ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ.. ************************************** ** ಹೇ ಹೃದಯವೇ  ಏಕೆ ಕೊಲ್ಲುವೆ ನನ್ನನ್ನಾ  ಪ್ರತಿ ಕ್ಷಣ ಮಾಡಿ ಅವನ ನೆನಪನ್ನಾ ಬೇಕಾದರೇ ನಿಲ್ಲಿಸಿಬಿಡು ನಿನ್ನ ಬಡಿತವನ್ನ  ನೆನೆದು ನೆನೆದು ಮಾಡದಿರು ಮನಕೆ ನೋವನ್ನಾ ಹೇ ಹೃದಯವೇ  ನೋಡುವ ಹಂಬಲಕೆ ಸಾಂತ್ವಾನ ಹೇಳದಿರು ಇನ್ನೇನು ಮನದ ನೋವೆ ತಿಳಿಸಿದೆ ಎಲ್ಲವನು ಸಮಾಧಿ ಮಾಡಿ ನಿನ್ನೇಲ್ಲಾ ಭಾವನೆಗಳನು ಅರಿಯದೆ ಹೋದೆಯಾ ಮುಂದಿನ ದಿನಗಳನು... ಹೇ ಹೃದಯವೇ  ನೋವಿನಾ ಪ್ರೀತಿಯ ತಪ್ಪಿಗೆ ಕ್ಷಮಿಸೆನ್ನಾ ತಿಳಿಯದಾದೆನೆ ಪ್ರೀತಿಯ ಮೋಸವನ್ನಾ  ಇಷ್ಟಾದರೂ ನಾ ಮರೆವೆನೆ ಅವನನ್ನಾ  ಜೀವ ಇರುವರೆಗೂ ಪ್ರೀತಿಸುವೆ ನಿನ್ನಲ್ಲೇ ಬಚ್ಚಿಟ್ಟು ನನ್ನ ಇನಿಯನನ್ನಾ..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಅತೃಪ್ತ ಅಬಲೆಯ ಜೀವನ..!

Image
  ಅತೃಪ್ತ ಅಬಲೆಯ ಜೀವನ..! ****************************************** ಅ ರಿಯದ ವಯಸಲಿ ಮದುವೆಯ ದಿಬ್ಬಣ... ಬಹುಬೇಗ  ಬಂದಿತೆ     ನೋವಿನ ಕಂಕಣ ... ಕನಸೇ ಇಲ್ಲದ ನಿನ್ನ ಬರಿದಾದ ಜೀವನ... ಹುಸಿಯಾಯಿತು ನಿನ್ನ ಹಸಿರಿನ ಪಯಣ!!! ಹಗಲಿರುಳು ದುಡಿವೆ ನೀ  ಮನೆಯಾಕಿಯಂತೆ.... ಹೆಸರಿಗಷ್ಟೇ ಒಡತಿ, ಉಳಿಯುದೇನಿಲ್ಲ ಮತ್ತೆ... ಸಿಲುಕಿರುವೆ ನೀ ಬಂಧನಗಳ ಜೊತೆ... ಉಳಿಯುದಾದರೊಂದೆ ಅದುವೆ ಚಿಂತೆ!!! ಹಿಂದೆಂದೂ ಕಂಡಿರದ ಹಿಂಸಿಸುವ ಜನಗಳನೊಳಗೂಡಿ... ಸೋಲುವೆ ನೀನು ಸಮಸ್ಯೆಗಳ ಬಡಿದಾಡಿ... ನಿಲ್ಲದು ಈ ನಿನ್ನ ಒಬ್ಬಂಟಿಯ ಗಾಡಿ... ನಿನ್ನವರಂತಿದ್ದರೂ ನಿನ್ನವರಲ್ಲ ನೀನೆ ಹೊರಬೇಕು ಬಾಳಿನ ಬಂಡಿ!!! ಮುಗಿಯದು ನಿನ್ನ ಕಷ್ಟಗಳ ಪಯಣ... ಬರುವವರೆಗೂ ಮುಕ್ತಿಯ ಆಗಮನ... ಅನಿಸಿರಬೇಕು ನಿನದು ಅತೃಪ್ತ ಜೀವನ... ಇರಬಹುದು ಇದಕ್ಕೆಲ್ಲಾ ವಿಧಿಯೇ ಕಾರಣ!!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮನ ಬರಡಾಗಿ ಬೆತ್ತಲಾಗಿದೆ.!

Image
  ಮನ ಬರಡಾಗಿ ಬೆತ್ತಲಾಗಿದೆ.! * ***************************************** ಭಾ ವನೆಗಳ ಜೊತೆಗೂಡಿ.. ಪ್ರಕೃತಿಯೊಡನೆ ನಲಿದಾಡಿ.. ಚಂದಿರನೊಡನೆ ಮುದ್ದಾಡಿ ನೂರಾರು ಪದಗಳ ಕುಡಿ-ಕುಡಿ ಚಿತ್ರಿಸಿ ಅವಳ ವರ್ಣಿಸುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ...! ಸುರಿವ ಮಳೆಯೊಡನೆ ಕುಣಿದಾಡಿ.. ಹೊಳೆವ ನಕ್ಷತ್ರಗಳ ಕಂಡು ನಾಟ್ಯವಾಡಿ.. ತೀರದ ಸಮುದ್ರದಲೆಯಲಿ ತೆಲಾಡಿ.. ಪದಗಳಲೆ ಸರಸವಾಡುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ..! ನೆನಪಿನ ರೆಂಬೆ-ಕೊಂಬೆಯಲಿ ನೇತಾಡಿ.. ಕಗ್ಗತ್ತಲ್ಲಲ್ಲಿ ಬೆಳುಕಿಗಾಗಿ ಹುಡುಕಾಡಿ.. ಪ್ರೀತಿ-ಪ್ರೇಮವೆ ಹೆಚ್ಚೆ0ದು ಕಾದಾಡಿ... ಪ್ರತಿ ಕನಸಲು ಅವಳ ಸ್ಪರ್ಶವ ಹುಡುಕುತ್ತಿದ್ದ ಮನ.. ಬರಡಾಗಿ ಬೆತ್ತಲಾಗಿದೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ತಂಗಿಯ ಬಣ್ಣನೆ.!

Image
ತಂಗಿಯ ಬಣ್ಣನೆ.! ***************************************** ಮು ಗ್ಧತೆಯ ಮಗುವೆ ನೀನು... ನಿನ್ನ ನಗುವೆ ಎನಗೆ ಸಿಹಿ ಜೇನು... ಮುನಿಯಲು ನೀನು ಹೆಚ್ಚುವುದು ನಿನ್ನಂದವಿನ್ನು...  ಕಂಬನಿ ಕೂಡ ನೋಯುವುದು ತಾಕಲು ನಿನ್ನ ಕಣ್ಣನ್ನು... ಮಾಸದಿರಲಿ ನಿನ್ನ ಕಣ್ಣ ಹೊಳಪು... ಮುಸುಕೆಳೆಯುವನು ಶಶಿಯು ಕಂಡು ನಿನ್ನ ಮನದ ಬಿಳುಪು... ಮಿಂಚು ಹೊಡೆದಂತೆ ಕೊಂಚವೆ ನಾಚುವೆ ನೀ...  ಸಂಚು ಹೂಡಿರುವೆ ಪ್ರೀತಿಯ ಕುಂಚ ಹಿಡಿದು ನೀ...  ಶಾಶ್ವತ ನಿನ್ನ ಮೇಲೆ ನನಗೆ ಸಿಹಿ ಸ್ವಾರ್ಥ... ಮುಂದೇಳು ಜನುಮದಲೂ ನೀ ನನಗೆ ಸ್ವಂತ !!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಚೆಲುವೆ ಚೆಲುವೆ...!

Image
  ಚೆಲುವೆ ಚೆಲುವೆ...! ****************************************** ನ ಗುವ ಚಂದರನಿಗೆ ನೀ ಬಾನರಸಿ ಹೊಳೆವ ನಕ್ಷತ್ರಗಳಿಗೆ ನೀ ಉರ್ವಶಿ, ಈ ಹೃದಯ ಕದ್ದಿರುವ ನನ್ನರಸಿ ಕವಿತೆಗಳಲು ಮೂಡುತ್ತಿವೆ ನಿನ್ನನರಸಿ ಬಯಸಿ ಚೆಲುವೆ.. ಚೆಲುವೆ..! ಬೆಳದಿಂಗಳ ಚಂದಿರನಂತೆ ಕಾಡುವೆ ಕಣ್ಣಲ್ಲಿ ಕನಸಲಿ.. ನಿನ್ನ ಸಹಪಾಠಿಗೆ ಸರಿಸಾಟಿಯಾರಿಲ್ಲ ಕಗ್ಗತ್ತಲಿನ ರಾತ್ರಿಯಲಿ.. ಸುರಿವ ಮಳೆಹನಿಯ ಪ್ರತಿ ತುಂತುರಿನಲಿ... ಬೀಸುವ ಆ ಬಿರುಗಾಳಿಯ ರಬಸದಲ... ಜುಳು ಜುಳು ಅರಿವ ಆ ಜಲಪಾತದಸಿರಿಯಲಿ ನೀ ಸನಿಹ ಬರುವೆ ನೆನಪಾಗುವೆ.. ಚೆಲುವೆ..ಚೆಲುವೆ..! ನೀ ನೆನಪಾದರು/ಆಗದಿದ್ದರು ಸರಿಹೆ.. ನನ್ನ ಕವಿತೆಗೆ ನೀ ಸ್ಫೂರ್ತಿ..! ನೀ ಬಳಿ ಬಂದರು/ಬಾರದಿದ್ದರು ಸರಿಹೆ.. ಈ ಹೃದಯಕೆ ನೀ ಮರೆಯಾಗದೆ ಅಳಿಯದೆ ಉಳಿಯುವೆ.. ಚೆಲುವೆ.. ಚೆಲುವೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಉತ್ತರ ಸಿಗದ ಬದುಕು..!

Image
ಉತ್ತರ ಸಿಗದ ಬದುಕು..! **************************************** ಕ ತ್ತಲೆ ತುಂಬಿದ ಬದುಕಲ್ಲಿ  ಪ್ರಶ್ನೆಗಳ ಸುರಿಮಳೆ ಮನದಲ್ಲಿ  ದಾರಿ ಕಾಣದೆ ಅಲ್ಲಲ್ಲಿ  ತಡವರಿಸಿ ಬೆಳಕನು ಹುಡುಕುತ  ಕರಿಗತ್ತಲಲ್ಲಿ   ದೂರದ ತಟದಲ್ಲಿ  ನಂದಾದೀಪವು ಕಾಣಲು  ಮನ ಸಂತೋಷದಿಂದಿರಲು..! ತುಸು ಬೀಸಿ ಬಂದ ಪಿಸುತಂಗಾಳಿ ಆವರಿಸಿರಲು  ಮನ ಭಯದಿ ತುಂಬಿರಲು ಮನ ಕೂಗಿ ಕರೆದರೂ  ಕಂಡು ಕಾಣದೆ  ತಣ್ಣನೆ ಬೀಸಿ ದೀಪವ ನಂದಿಸಿರಲು  ಮರು ಮಾತಾಡದೆ ಮಾಯವಾಯಿತು ಬೆಳಕ ಕಾಣದೆ ಮನ ನಿಂತಲ್ಲೇ ಮಂದವಾಯಿತು... ಮನದಿ ಉತ್ತರವೇ ಸಿಗದಂತಾಯಿತು..!       Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಸ್ನೇಹ ಸಂಕೋಲೆ.!

Image
ಸ್ನೇಹ ಸಂಕೋಲೆ.! ******************************************** ದೂ ರವಿದ್ದರು ನೀ ಮನದಲ್ಲಿ ಕೂತಿರುವೆ...  ಅಪರಿಚಿತರನ್ನು ಸನಿಹ ಬಿಡದೆ ಸ್ನೇಹ ಸ್ವಾರ್ಥಿಯಾಗಿರುವೆ... ಖುಷಿಯಲ್ಲಿ ಮಗುವಾಗಿ ಭುಜಕ್ಕೊರಗಿ, ದುಃಖಕ್ಕೆ ಅಪ್ಪುಗೆಯ ಸಾಂತ್ವಾನವಿರಿಸಿ, ಸ್ನೇಹದ ಆಕಾಂಕ್ಷೆಯಾಗಿರುವೆ... ಅಗಲಿರಲಾರೆ ನಿನ್ನ ನಾ ಗೆಳತಿ... ನಗುವ ಮುಖ ತೋರಿ ಮಗುವಾಗಿಸು ನಿನ್ನ ಮಡಿಲಲ್ಲಿ ಒಂದು ಸರತಿ... ಎಂದಿಗೂ ಸ್ನೇಹದ ಚಿಲುಮೆಯಾಗಿರು ನನ್ನೊಡತಿ... ಕೋಪ ಕೊಂಚ ಹಿಡಿದು, ಖುಷಿಯ ಹೂಗುಚ್ಚ ಮುಡಿದು, ಬಾಡದಿರು ನೀ ನನ್ನ ಮುದ್ದು ಕೋತಿ!!! ✍️ಮೇಘ  ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಕಳೆದ ದಿನಗಳ ನೆನೆದು..!!

Image
  ಕಳೆದ ದಿನಗಳ ನೆನೆದು ************************************** ** ಮ ರುಕಳಿಸದ ಸಂತೋಷದ ದಿನಗಳ ನೆನೆದು  ಮನ ದುಃಖದ ದಿನವ ಮರೆತಿದೆ ಇಂದು  ಕಂಬನಿ ಕಣ್ಣಲ್ಲೇ ಮಾಯವಾಗಿ  ತುಸು ನಗುತಿರಲು  ಅಂದು ಬೇರೊಂದು ಮನ ಸಂತೈಸಿದ ದಿನವ ನೆನೆದು  ಮತ್ತೆ ಕಣ್ಗಳು ತುಂಬಿರಲು  ದೂರಾದ ಮನವೇಕೆ ಮನವೇ  ಕೂಗಿ ಕರೆದರೂ ಕನಸಲೂ ಹಿಂದಿರುಗದ ಮನವ ನೆನೆದು  ಮನಕೆ ಮನವೇ ಸಂತೈಸಿರಲು  ಕಳೆದ ದಿನಗಳ ನೆನೆದು ಸಂತಸದಿಂದಿರು  ಲೋಕವೇ ಎದುರಾದರು  ಯಾರೇ ದೂರಾದರು  ಮನಕೆ ಮನವೇ ನೀ ಮರೆಯದಿರು..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  974310474 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇