ನೆನೆದು ನಿನ್ನ ನೆನೆದು.!
©All Rights reserved by Myunsungpoetry.blogspot.com R ef no :- MUP/15012026/62 ************************************* ನೆನೆದು ನಿನ್ನ ನೆನೆದು, ಗೆಳತಿ ಕಾದು ಕುಳಿತೆ ದಿನವು ನಿನ್ನ ದ್ವನಿಗೆ, ನೂರು ಸಾರಿ ಕೇಳು ಬೇಕು ನಿನ್ನ ಸಲುಗೆ. |2||ಗೆಳತಿ..| ಸೋತು ಸದ್ದಿಲ್ಲದಂತೆ ನೆನೆದೆ ನಿನ್ನ ನಗುವ, ಏಕೆ ದೂರ ಉಳಿವೆ ದಾರಿ ತಪ್ಪಿ ದಣಿದೆ.|2| |ಗೆಳತಿ..| ಸಾಲು ನೋವು ಬರಲಿ ಸಾಕು ನಿನ್ನ ಒಲವು,|2| ನಗುವೆ ನೀನಾಗಿರು ಛಲದಿ ಮುನ್ನಡೆವೆ.|ನೆನೆದು..| ಪ್ರೀತಿ ಪಾಠ ಕಳಿಸಿ ಸಾಲು ಕನಸು ಕಟ್ಟಿರುವೆ,|2| ಕಾಣದ ಕಡಲಿನೊಳಗೆ ಪ್ರೀತಿ ಬಚ್ಚಿಡುವೆ. |ನೆನೆದು..| ************************************ 𝐊𝐞𝐞𝐫𝐭𝐡𝐚𝐧 𝐊 𝐊