Posts

Showing posts from January, 2023

ಕೋಮಲ ಕನ್ಯೆ..!

Image
©All Rights reserved by  Myunsungpoetry.blogspot.com Ref no :- MUP/23012023/31 ************************************** ಸಾ ರುವೆ ಸಾವಿರ ಭಾರಿ.. ನೆನೆಯುವೆ ನೂರು ಸಾರಿ.. ನೆನಪಿನ ದಾರಿಯಲಿ ಜಾರಿ.. ಎಡಬಿಡದೆ ನಿನ್ನನ್ನು ನಾ... ಕೋಮಲ ಕನ್ಯೆ...! ಬರೆದದ್ದು ಬರಿ ಪದವಲ್ಲ.. ನಾ ಹೇಳಿದ್ದು ಹಾಸ್ಯ ತುಣುಕುವು ಅಲ್ಲ.. ನಿನ್ನಯ ಗೆಳೆತನವೆ ಒಂದು ಸಿಹಿ ಬೆಲ್ಲ.. ನಾ ನಿನ್ನ ಸದ್ಗುಣಕೆ ಸೋತ ನಲ್ಲ... ಕೋಮಲ ಕನ್ಯೆ..! ಮಗುವಿನಂತಹ ನಿನ್ನ ಮನಸ್ಸಿಂದು.. ಕೊರಗುತ್ತಿವುದೆನೋ ನನ್ನ ಮಾತಿಗೆ  ನೊಂದು.. ತಿಳಿದು-ತಿಳಿಯದೆ ನಿನ್ನ ಮನಕದಡಿದೆ.. ಕ್ಷಮಿಸು ನನ್ನ ಕೋಮಲ ಕನ್ಯೆ..! ಅದೃಷ್ಟ-ಕಷ್ಟ ನಿಭಾಯಿಸಲು ನಾ ಸಿದ್ದ.. ನಿನ್ನ ಬೆಂಬಲವಿದ್ದರೆ ಇಲ್ಲ ಯಾವುದು ಅಸಾಧ್ಯ.. ಇದುವೆ ನನ್ನ ಮನಸಿನ ದೀರ್ಘ ಗದ್ಯ... ಕಾವುವೆ ನಿನ್ನಯ ಆಗಮನದ ಪದ್ಯ.. ನಾ ಸದಾ ಕೋಮಲ ಕನ್ಯೆ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ಮೋಹದ ಬಲೆಗೆ ಮೌನದ ಕಿಡಿ!

Image
  ಮೋಹದ ಬಲೆಗೆ ಮೌನದ ಕಿಡಿ! ©All Rights reserved by  Myunsungpoetry.blogspot.com Ref no :- MUP/16012023/30 ************************************** ಸಾ ಕೆಂದರು ಬಿಡದೆ ಸಮಯದೊಡನೆ ಬಡಿದಾಡಿ ಬಡಿದಾಡಿ.. ಮಾಂಕಾಗಿ ಮನ ಮೌನಕ್ಕೆ ಜಾರಿದೆ, ಅತಿಯಾಗಿ ಯೋಚಿಸಿ- ಯೋಚಿಸಿ ದಡಬಡನೆ ಕುಣಿದಾಡಿ ಕುಣಿದಾಡಿ... ಏಕಾಂಗಿಯಾಗಿ ಮನ ಕತ್ತಲಿಗೆ ಜಾರಿದೆ.! ಕಾಣದ ಕನಸನು ಕಣ್ಣಂಚ್ಚಲಿ ತರಿಸಿ, ಕಾಡಿಸಿ-ಕಾಡಿಸಿ ಉತ್ತುಂಗಕ್ಕೆ ಏರಿಸಿ, ರಾಶಿ-ರಾಶಿ ಯೋಜನೆಗಳ ರೂಪಿಸಿ ಚಿತ್ರಿಸಿ, ಆ ಪುಸ್ತಕದ ಪುಟವ ಕಣ್ಮರೆಯಾಗಿಸಿ, ಈಗ ಮಾಂಕಾಗಿ, ಏಕಾಂಗಿಯಾಗಿ ಕುಳಿತು, ಜಾರಿದೆ ಪ್ರೀತಿ ಮೋಹದ ಬಲೆಗೆ ಹುಡುಕುತ ಅವಳ ಹೃದಯದ ನಾಡಿ.. ಈ ಕವಿಯ ಮೌನದ ಕಿಡಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮಗ್ಗಲು ಮಾರಿ..!

Image
  ಮಗ್ಗಲು ಮಾರಿ..! Credit:- pinterest.com ©All Rights reserved by  Myunsungpoetry.blogspot.com Ref no :- MUP/01012023/29 ************************************** ಮ ಗ್ಗಲು ಮಾರಿ ನರವ್ಯೂಹದೊಳು ಸೇರಿ, ಗದ್ದಲಕೊಳಮಾಡಿದೆ ನೂರು-ಬಾರಿ, ಕಾಣದ ತೀರಕ್ಕೆ ಕರೆಯೋಲೆ ತೋರಿ, ನಮ್ಮೆಲ್ಲರ ತಲೆಯೋಳು ತೂರಿ-ತೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಯುವಜನತೆ ತೋರದೆ ದಾರಿ, ಬಿದ್ದಿಹರು ಅಂತರ್ಜಾಲದೊಳು ಕಾಲುಜಾರಿ..! ಬೆನ್ನತ್ತ ಬೇತಾಳದಂತೆ ಹೆಗಲ ಮೇಲೇರಿ, ಸಂಬಂಧ ಬರಿದುಮಾಡಿದ ಕ್ರೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಆಲದ ಮರದಂತೆ ಕೈಯೋಳು ಬೇರೂರಿ, ಅರಿದು ಮೋರಿಸೇರುತ್ತಿದೆ ಸೃಜನತೆ ಸೋರಿ, ಹೊರಟಿದೆ ಕಾಲ್ಪನಿಕ ಲೋಕದೋಳು ಮನಸನು ಮಾರಿ, ಮಾನವನೇ,,, ನೀ ಸೃಷ್ಟಿಸಿದ ಹೆಮ್ಮಾರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇