Posts

Showing posts from February, 2023

ಕೇಳಿಲ್ಲಿ ಈ ಭಾವುಕ ಭಾವನೆ..!

Image
ಕೇಳಿಲ್ಲಿ ಈ ಭಾವುಕ ಭಾವನೆ..! ©All Rights reserved by  Myunsungpoetry.blogspot.com Ref no :- MUP/14022023/32 ************************************** ಕೇ ಳಿಲ್ಲಿ... ಕನಸೊಂದು ರೆಕ್ಕೆ ಬಡಿಯುತ್ತಿದೆ, ಕಲರವ ಭಾವನೆಗೆ ಬಣ್ಣ ಹಚ್ಚುತ್ತಿದೆ, ಕಾಣದ ಈ ಹೃದಯಕೆ ಹರುಷ ನೀಡುತ್ತಿದೆ, ಹಾದಿಹರೆಯದ ಈ ಆದಿವಾಸಿಗೆ ಜೀವ ತುಂಬುತ್ತಿದೆ, ಕೇಳಿಲ್ಲಿ, ಈ ಭಾವುಕ ಭಾವನೆ.! ಕೇ ಳಿಲ್ಲಿ.... ಪದಗಳ ನದಿಯೊಂದು ಉಕ್ಕಿ ಹರಿಯುತ್ತಿದೆ, ನಕ್ಷತ್ರಗಳ ಹೊಳಪಿಗೆ ರೂಪಾ ನೀಡುತ್ತಿದೆ, ಕತ್ತಲಲ್ಲಿ ಕಡಲಿಗೆ ಮುತ್ತನಿಕ್ಕುತ್ತಿದೆ, ಈ ಕವಿಯ ಭಾವನೆಗೆ ಭವ್ಯ-ಬಂಧ ಅರಸಿದೆ, ಕೇಳಿಲ್ಲಿ, ಈ ಭಾವುಕ ಭಾವನೆ.! ಕೇ ಳಿಲ್ಲಿ.... ಮೌನದ ಆಣೆಕಟ್ಟು ತುಂಬಿ ಹರಿಯುತ್ತಿದೆ, ಕೂಡಿಟ್ಟ ಹನಿ-ಹನಿ ಮಾತುಗಳು ಹೊರ ಚಿಮ್ಮುತ್ತಿದೆ, ಪ್ರೀತಿಯ ಸ್ನೇಯಿತೆಗೆ ಕವಿತೆ ಕೆತ್ತುತ್ತಿದೆ, ದಾರಿ ಕಾಣದೆ ಈ ಮುಸ್ಸಂಜೆಯಲಿ ನಿನ್ನ ಸೇರುತ್ತಿದೆ, ಕೇಳಿಲ್ಲಿ, ಈ ಭಾವುಕ ಭಾವನೆ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌