ನೆನಪಿನ ನೆರಳು..!
©All Rights reserved by Myunsungpoetry.blogspot.com R ef no :- MUP/15032025/58 ************************************* ಕಂಡು ಕಾಣದೆ ಹೋದೆ ನೀನು ಕಂಡ ಕನಸಲ್ಲಿ ನನ್ನನಿರಿಸಿ, ನೀ ಹೋದಮೇಲೆ ಚಿಂತೆಯೇನು ಚಿತೆಯಲ್ಲಿ ನನ್ನ ಭಾವ ಮುಳುಗಿದೆ.! (2) ನೂರು ಸಂಜೆ ನಿನ್ನ ಹಿಂದೆ ಮೂಕನಾಗೆ ನಾ ಬಂದೆ, ಸಾಲು ನೆನಪಿನ ಕದ ನೀ ತೆರೆದೆ, ಆ ನೆರಳಲೆ ಇಂದು ನಾ ಉಳಿದೆ.! (2) ಸೋತ ಹೃದಯ ಸದ್ದಿಲ್ಲದೆ ಕುಳಿತಿದೆ, ಸಂತೋಷ ಆ ಸ್ಪರ್ಶಕೆ ಕಾದಿದೆ, ಹೇಳಿಬಿಡು ಮನತೆರೆದು ಇಂದೆ ಜೊತೆಯಾಗಿರುವೆ ಎಂದು ಮುಂದೆ.! (2) ************************************* Keerthan.K.K