Posts

Showing posts from February, 2025

ನೂರು ಸಂಜೆ ನಿನ್ನ ಹಿಂದೆ.✨

Image
©All Rights reserved by  Myunsungpoetry.blogspot.com R ef no :- MUP/16022025/57 ************************************* ನೂರು ಸಂಜೆ ನಿನ್ನ ಹಿಂದೆ ಮಾತು ಕವಿತೆ ಆಗಿದೆ  ನಾನು ಇಂದು ನಿನ್ನ ಮುಂದೆ  ಪದಗಳೆಕೊ ಮಾಸಿದೆ.. ಮಾಸಿದೆ..  ಸಲ್ಲದೇನೆ ನನ್ನ ಭಾವನೆ  ಮುಖಳಾಗೆ ನೀ ಉಳಿದೆ  ಸಾಲು ಸಾಲು ಪದಗಳಲ್ಲಿ  ಮನದ ಭಾವನೆ ಹೊರಟಿದೆ.. ಹೊರಟಿದೆ.. ಹರಿವ ನದಿಯ ಸದ್ದಿನಲ್ಲೂ  ನಿನ್ನ ಮಾತೇ ಜೋರಿದೆ  ಆ ಮಿನುಗು ಚುಕ್ಕಿತಾರೆ  ನೀ ಕಾಣದೆ ಅಳುತಿದೆ.. ಅಳುತಿದೆ.. ಎಂದಿರದ ಪ್ರಶ್ನೆಗಳಿಂದು  ನನ್ನ ಮುಂದೆ ತೆರೆದಿದೆ  ಬೇಗ ನಿನ್ನ ಭಾವ ತಿಳಿಸು  ಕಾದು ಜೀವ ನೊಂದಿದೆ.. ನೊಂದಿದೆ.. ************************************* Keerthan.K.K