ತಂಗಿಯ ಬಣ್ಣನೆ.!
ತಂಗಿಯ ಬಣ್ಣನೆ.! ***************************************** ಮು ಗ್ಧತೆಯ ಮಗುವೆ ನೀನು... ನಿನ್ನ ನಗುವೆ ಎನಗೆ ಸಿಹಿ ಜೇನು... ಮುನಿಯಲು ನೀನು ಹೆಚ್ಚುವುದು ನಿನ್ನಂದವಿನ್ನು... ಕಂಬನಿ ಕೂಡ ನೋಯುವುದು ತಾಕಲು ನಿನ್ನ ಕಣ್ಣನ್ನು... ಮಾಸದಿರಲಿ ನಿನ್ನ ಕಣ್ಣ ಹೊಳಪು... ಮುಸುಕೆಳೆಯುವನು ಶಶಿಯು ಕಂಡು ನಿನ್ನ ಮನದ ಬಿಳುಪು... ಮಿಂಚು ಹೊಡೆದಂತೆ ಕೊಂಚವೆ ನಾಚುವೆ ನೀ... ಸಂಚು ಹೂಡಿರುವೆ ಪ್ರೀತಿಯ ಕುಂಚ ಹಿಡಿದು ನೀ... ಶಾಶ್ವತ ನಿನ್ನ ಮೇಲೆ ನನಗೆ ಸಿಹಿ ಸ್ವಾರ್ಥ... ಮುಂದೇಳು ಜನುಮದಲೂ ನೀ ನನಗೆ ಸ್ವಂತ !!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇