ಮೋಹದ ಬಲೆಗೆ ಮೌನದ ಕಿಡಿ!
ಮೋಹದ ಬಲೆಗೆ ಮೌನದ ಕಿಡಿ!
©All Rights reserved by Myunsungpoetry.blogspot.com
Ref no :- MUP/16012023/30
Ref no :- MUP/16012023/30
**************************************
ಸಾಕೆಂದರು ಬಿಡದೆ ಸಮಯದೊಡನೆ
ಬಡಿದಾಡಿ ಬಡಿದಾಡಿ..
ಮಾಂಕಾಗಿ ಮನ ಮೌನಕ್ಕೆ ಜಾರಿದೆ,
ಅತಿಯಾಗಿ ಯೋಚಿಸಿ- ಯೋಚಿಸಿ
ದಡಬಡನೆ ಕುಣಿದಾಡಿ ಕುಣಿದಾಡಿ...
ಏಕಾಂಗಿಯಾಗಿ ಮನ ಕತ್ತಲಿಗೆ ಜಾರಿದೆ.!
ಕಾಣದ ಕನಸನು ಕಣ್ಣಂಚ್ಚಲಿ ತರಿಸಿ,
ಕಾಡಿಸಿ-ಕಾಡಿಸಿ ಉತ್ತುಂಗಕ್ಕೆ ಏರಿಸಿ,
ರಾಶಿ-ರಾಶಿ ಯೋಜನೆಗಳ ರೂಪಿಸಿ ಚಿತ್ರಿಸಿ,
ಆ ಪುಸ್ತಕದ ಪುಟವ ಕಣ್ಮರೆಯಾಗಿಸಿ,
ಈಗ ಮಾಂಕಾಗಿ, ಏಕಾಂಗಿಯಾಗಿ ಕುಳಿತು,
ಜಾರಿದೆ ಪ್ರೀತಿ ಮೋಹದ ಬಲೆಗೆ
ಹುಡುಕುತ ಅವಳ ಹೃದಯದ ನಾಡಿ..
ಈ ಕವಿಯ ಮೌನದ ಕಿಡಿ..!
✍️ಕೀ.ಕೆ
ಬೆಂಗಳೂರು
***************************************
Please contact through,
E-mail- keerthankeeru2001@gmail.com
Ph No.- 9743104743


Comments