ಕೇಳಿಲ್ಲಿ ಈ ಭಾವುಕ ಭಾವನೆ..!
ಕೇಳಿಲ್ಲಿ ಈ ಭಾವುಕ ಭಾವನೆ..!
©All Rights reserved by Myunsungpoetry.blogspot.com
Ref no :- MUP/14022023/32
Ref no :- MUP/14022023/32
**************************************
ಕೇಳಿಲ್ಲಿ...
ಕನಸೊಂದು ರೆಕ್ಕೆ ಬಡಿಯುತ್ತಿದೆ,
ಕಲರವ ಭಾವನೆಗೆ ಬಣ್ಣ ಹಚ್ಚುತ್ತಿದೆ,
ಕಾಣದ ಈ ಹೃದಯಕೆ ಹರುಷ ನೀಡುತ್ತಿದೆ,
ಹಾದಿಹರೆಯದ ಈ ಆದಿವಾಸಿಗೆ ಜೀವ ತುಂಬುತ್ತಿದೆ,
ಕೇಳಿಲ್ಲಿ, ಈ ಭಾವುಕ ಭಾವನೆ.!
ಕೇಳಿಲ್ಲಿ....
ಪದಗಳ ನದಿಯೊಂದು ಉಕ್ಕಿ ಹರಿಯುತ್ತಿದೆ,
ನಕ್ಷತ್ರಗಳ ಹೊಳಪಿಗೆ ರೂಪಾ ನೀಡುತ್ತಿದೆ,
ಕತ್ತಲಲ್ಲಿ ಕಡಲಿಗೆ ಮುತ್ತನಿಕ್ಕುತ್ತಿದೆ,
ಈ ಕವಿಯ ಭಾವನೆಗೆ ಭವ್ಯ-ಬಂಧ ಅರಸಿದೆ,
ಕೇಳಿಲ್ಲಿ, ಈ ಭಾವುಕ ಭಾವನೆ.!
ಕೇಳಿಲ್ಲಿ....
ಮೌನದ ಆಣೆಕಟ್ಟು ತುಂಬಿ ಹರಿಯುತ್ತಿದೆ,
ಕೂಡಿಟ್ಟ ಹನಿ-ಹನಿ ಮಾತುಗಳು ಹೊರ ಚಿಮ್ಮುತ್ತಿದೆ,
ಪ್ರೀತಿಯ ಸ್ನೇಯಿತೆಗೆ ಕವಿತೆ ಕೆತ್ತುತ್ತಿದೆ,
ದಾರಿ ಕಾಣದೆ ಈ ಮುಸ್ಸಂಜೆಯಲಿ ನಿನ್ನ ಸೇರುತ್ತಿದೆ,
ಕೇಳಿಲ್ಲಿ, ಈ ಭಾವುಕ ಭಾವನೆ.!
✍️ಕೀ.ಕೆ
ಬೆಂಗಳೂರು
***************************************
Please contact through,
E-mail- keerthankeeru2001@gmail.com
Ph No.- 9743104743


Comments