ಮರಳಿಬಾರದ..... ಮನ ಅಳಿಸದ ಸುಂದರ ಸವಿ ನೆನಪುಗಳು.....
ಮರಳಿಬಾರದ.....
ಮನ ಅಳಿಸದ
ಸುಂದರ ಸವಿ ನೆನಪುಗಳು....
****************************************
©All Rights reserved by Myunsungpoetry.blogspot.com
Ref no :- MUP/09082022/19
****************************************
ಹುಣ್ಣಿಮೆಯ ರಾತ್ರಿಯಲಿ
ಪೂರ್ಣ ಚಂದಿರನ ಸುಂದರ ಬೆಳದಿಂಗಳಲಿ
ತಂಗಾಳಿ ತಣ್ಣನೆ ಬೀಸಿ ಮೈ ಸೋಕಿದ ಹಾಗೆ
ಮನಃಶಾಂತಿ ತುಂಬಿದ ಹೃದಯ
ವೇದನೆ ಅರಿಯದ ಚಿತ್ತ
ತೊದಲ ನುಡಿಗಳು
ಮೊಗದಲಿ ನಗುವನ್ನೇ ಆಭರಣವಾಗಿ ತೊಟ್ಟಿದ್ದ
ಬಾಲ್ಯದ ಆ ಮಧುರ ಕ್ಷಣಗಳು ನೆನಪಾಗಿ ಮೈ ರೋಮಾಂಚನವಾಗಿ ಮನ ಹಾಯಾಗಿರಲು.....
ಅಮ್ಮನು ಆಡಿದ ಜೋಗುಳ
ಅಪ್ಪನ ಹೆಗಲೇರಿದ ಆ ದಿನಗಳ
ಬಾನಿನಲ್ಲಿ ಚಂದಮಾಮನ ಕಂಡು
ಸವಿ ಮಾತಿಗಾಗಿ ಕಾತುರ
ಶಶಿಯು ಧರೆಗೆ ಇಳಿಯಲಾರ ಎಂಬ ಬೇಸರ
ತಾರೆಗಳ ಎಣಿಸುವ ಸಡಗರ
ಎಣಿಸಲಾಗದೆ ಓಡಿ ಸರಸರ
ಅಜ್ಜಿಯ ಮಡಿಲೇರಿ ಕೇಳಿದ ಕಥೆಗಳ ಸಾರ
ಗಾನದಂತೆ ಇಂದಿಗೂ ಸುಮಧುರ
ಪುನಃ ಪಿಸು ಮಾತಿನಂತೆ ಕಿವಿಯಲಿ ಇಂಪಾಗಿರಲು.....
ಸವಿ ಸವಿ ಸಾವಿರ ಸ್ಮೃತಿ ಕಾಮನಬಿಲ್ಲಂತೆ ಮೂಡಿರಲು
ಮನ ನಲಿದಾಡಿ ಸುರಲೋಕಕ್ಕೆ ಜಾರಿದ ಭಾಸ
ನೆನಪಲ್ಲೇ ನೆನಪನ್ನು ಮುದ್ದಿಸಿ
ನೆನಪೆಂದು ನೆನೆದು ಮೊಗದಲಿ ಮುಗುಳ್ನಗೆ ಆವರಿಸಿರಲು
ಮರಳಿಬಾರದ,,, ಮನ ಅಳಿಸದ,,
ಸುಂದರ ಸವಿ ನೆನಪುಗಳು
ಮಂದಹಾಸ ಹೆಚ್ಚಿಸಿರಲು
ಕಣ್ಗಳಲಿ ಮುಗ್ಧ ಆನಂದ ಭಾಷ್ಪದ ಮುತ್ತೊಂದು ಕಣ್ಣಲ್ಲೇ ಕರಗಿತು....
![]() |
Anu ....✍🏻❣️ Bengaluru. |
****************************************
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743
#Myunsungpoetry.blogspot.com#



Comments