ಓ ನನ್ನ ಸೂರ್ಯ..!
ಓ ನನ್ನ ಸೂರ್ಯ..!
*************************************
ಮುಸುಕು ಕವಿದಿರುವ ಮನಕೆ ನೀ ಬಂದೆ ಬೆಳಕಾಗಿ,
ಹೊಳೆವ ನಿನ್ನಂದಕೆ ಬೆರಗಾದೆ ತಲೆಬಾಗಿ..
ಸುಡುವ ಶಾಖಕೆ ಅಂಜಿ
ತುಸು ನಿನ್ನ ತೆಗಳುತ್ತ.. ತೆಗಳುತ್ತ..!
ಆದರೆ ನೀ ಹಿಂತಿರುಗುವ ಮುಸ್ಸಂಜೆಯಲಿ
ಕಂಡು ಆ ನಿನ್ನಂದ-ಚಂದ,
ಕಳೆದೆ ಕಾಲವ,, ಗಳಿಸುತ ಖುಷಿಯ
ಆಲಿಸುತ-ಆಲಿಸುತ ಹಕ್ಕಿಗಳ ಘಾನವ,
ನಿನ್ನ ಹೊಗಳುತ್ತ..ಹೋಗಳುತ್ತ..!
ನಿನ್ನ ತೇಜಸ್ಸನ್ನು ಹೋಲುವರಾರಿಲ್ಲ ಜಗದಲ್ಲಿ,
ನಿನ್ನ ಮುಂದೆ ತೃಣ ಮಾತ್ರ ನಾವಿಲ್ಲಿ...!
ಸಕಲ ಜೀವ ಜಂತುಗಳಿಗೆ
ನೀನೆ ಆಶ್ರಯ,
ನಿನ್ನ ವಿಸ್ಮಯಕ್ಕೆ ಶರಣಾದೆ ಓ ನನ್ನ ಸೂರ್ಯ.. ಸೂರ್ಯ..!
***************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743


Comments