ಮಂಕಾದ ಮನಸ್ಸು...!
ಮಂಕಾದ ಮನಸ್ಸು....!
**********************************
ಕತ್ತಲು ಕವಿದಂತೆ
ಕರಿಮೋಡ ಮನಸೇರಿದೆ,
ಬೆತ್ತಲು ಭೂವಿಯಂತೆ
ಎತ್ತ ನೋಡಿದರು ದಾರಿ ಕಾಣದಾಗಿದೆ,
ಇದ ಯೋಚಿಸುತ್ತ ಯೋಚಿಸುತ್ತ
ಮೌನಕ್ಕೆ ಜಾರಿ ಮoಕಾಗಿದೆ ಮನಸ್ಸು ..!
ಸುತ್ತಲು ಬರಿ ಕೊಳಕೇ
ತುಂಬಿರುವ ಕಾಲುವೆಯಂತೆ,
ಹಣದ ದಾಹ ತೀರಲು
ನಿಂತ ನರಬಕ್ಷಕರಂತೆ
ಕಾದಿರುವ ಜಗತ್ತಿನ ನಡು ಸಿಲುಕಿ
ಕೊರಗುತ್ತ ಕೊರಗುತ್ತ
ಮoಕಾಗಿದೆ ಮನಸ್ಸು,,!
ಸಾಗರದೆತ್ತರಕ್ಕೆ ಹಾರಿದ
ರಣ ಹದ್ದಿನಂತೆ,,
ಸಮುದ್ರದಾಳಕ್ಕೆ ಈಜಿದ
ತಿಮಿಂಗಳದಂತೆ,,
ಬಲು ದೂರಕ್ಕೆ ಚಿಂತಿಸಿ,,,
ಭವಿಷ್ಯವ ಚಿತ್ರಿಸಿ,, ಆಸೆಯ
ಉತ್ತುಂಗಕ್ಕೆ ಹೇರಿಸಿ ಕನಸ,
ದಾರಿ ಕಾಣದೆ, ನಡುರಸ್ತೆಯಲ್ಲಿ
ನಡುಗುತ್ತ,, ನಡುಗುತ್ತ,
ಮoಕಾಗಿದೆ ಮನಸ್ಸು ಮನಸ್ಸು...!!
✍️ಕೀ.ಕೆ
ಬೆಂಗಳೂರು.
ಬೆಂಗಳೂರು.
**************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743

Comments