ಕೋಮಲ ಕನ್ಯೆ..!
©All Rights reserved by Myunsungpoetry.blogspot.com
Ref no :- MUP/23012023/31
Ref no :- MUP/23012023/31
**************************************
ಸಾರುವೆ ಸಾವಿರ ಭಾರಿ..
ನೆನೆಯುವೆ ನೂರು ಸಾರಿ..
ನೆನಪಿನ ದಾರಿಯಲಿ ಜಾರಿ..
ಎಡಬಿಡದೆ ನಿನ್ನನ್ನು ನಾ...
ಕೋಮಲ ಕನ್ಯೆ...!
ಬರೆದದ್ದು ಬರಿ ಪದವಲ್ಲ..
ನಾ ಹೇಳಿದ್ದು ಹಾಸ್ಯ ತುಣುಕುವು ಅಲ್ಲ..
ನಿನ್ನಯ ಗೆಳೆತನವೆ ಒಂದು ಸಿಹಿ ಬೆಲ್ಲ..
ನಾ ನಿನ್ನ ಸದ್ಗುಣಕೆ ಸೋತ ನಲ್ಲ...
ಕೋಮಲ ಕನ್ಯೆ..!
ಮಗುವಿನಂತಹ ನಿನ್ನ ಮನಸ್ಸಿಂದು..
ಕೊರಗುತ್ತಿವುದೆನೋ ನನ್ನ ಮಾತಿಗೆ ನೊಂದು..
ತಿಳಿದು-ತಿಳಿಯದೆ ನಿನ್ನ ಮನಕದಡಿದೆ..
ಕ್ಷಮಿಸು ನನ್ನ ಕೋಮಲ ಕನ್ಯೆ..!
ಅದೃಷ್ಟ-ಕಷ್ಟ ನಿಭಾಯಿಸಲು ನಾ ಸಿದ್ದ..
ನಿನ್ನ ಬೆಂಬಲವಿದ್ದರೆ ಇಲ್ಲ ಯಾವುದು ಅಸಾಧ್ಯ..
ಇದುವೆ ನನ್ನ ಮನಸಿನ ದೀರ್ಘ ಗದ್ಯ...
ಕಾವುವೆ ನಿನ್ನಯ ಆಗಮನದ ಪದ್ಯ..
ನಾ ಸದಾ ಕೋಮಲ ಕನ್ಯೆ..!
✍️ಕೀ.ಕೆ
ಬೆಂಗಳೂರು
***************************************
Please contact through,
E-mail- keerthankeeru2001@gmail.com
Ph No.- 9743104743


Comments