ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?
©All Rights reserved by Myunsungpoetry.blogspot.com
Ref no :- MUP/18032023/33
**************************************
»ನಗುತ್ತಲೆ ಕುಣಿವೆನು ನಾನು..!
ನೀನಿರದೆ ನಾ ಉಳಿವೇನೇನು..?(2)
ನಿನ್ನ ನೋವಿಗೆ ಕಾರಣವೇನು..?
ನೀ ಕಾಣದೆ ಕದಡಿದೆ ಏನೋ ಬಾನು..?
ನನ್ನ ಭಾವ ಬಯಲ ಮಾಡಲೇನು..?
ಅಥವಾ ಮೂಕನಾಗಿ ಮಣ್ಣು ಸೇರಲೇನು..?
ದಣಿದು ದಾರಿ ತಪ್ಪಿರುವೆ ನಾನು.?
ಇಣುಕದ ತೀರವಾದೆ ಏನೋ ನೀನು..?
---------------------------------------------------
ನಗುತ್ತಲೆ ಕುಣಿವೆನು ನಾನು..!
ನೀನಿರದೆ ನಾ ಉಳಿವೇನೇನು..?(2)
---------------------------------------------------
»ಮನದ ಮಾತಾನೇಕೆ ಮಾಸುವೆ ನನ್ನಲ್ಲಿ.?
ನಾ ಪದಗಳ ಸಂಚಾರಿ ಆದನೆ ನಿನ್ನ ಬಾಳಲ್ಲಿ.?
ಹೇಳು ಏತಕೆ ನಾ ಕಾದಿರುವೆ ಇಲ್ಲಿ.?
ಮನಸೊಂದು ಕರಗಿ ಕೂತಿದೆ ನಿನ್ನಲಿ ..!
ನೀ ದೂರದ ಮಾತಾದರೆ ನನ್ನ ಬಾಳಲ್ಲಿ..?
ನೇಣು ಬಿಗಿಯಲಿ ಈ ಕವಿತೆ ನೆನಪಿನ ಕೊಂಬೆಯಲ್ಲಿ.!
ನಗುತ್ತಲೆ ಕುಣಿವೆನು ನಾನು..!
ನೀನಿರದೆ ನಾ ಉಳಿವೇನೇನು..?(2)


Comments