ಕಾಗೆಯ ಕೂಗು..!
©All Rights reserved by Myunsungpoetry.blogspot.com
Ref no :- MUP/21052023/37
*************************************
ಸೂರ್ಯೋದಯವ ಕಂಡು..(2)
ಉಡುಕುತ ಆಹಾರದ ಹಿಂಡು..
ಹೊರಟಿದೆ ಕಾಗೆಗಳ ದಂಡು..
ಸಿಗದೆ ಜಾಡು ಸೇರಿವೆ ಗೂಡು..(2)
ಕೇಳುವರಾರು ಈ ಕಾಗೆಯ ಕೂಗು..?(2)
ಕಾಡಿನಲ್ಲಿ ಕೂಗಾಡಿ..ಕೂಗಾಡಿ..(2)
ಸಂಗಡಿಗರೊಡನೆ ಹೋರಾಡಿ..
ದಿನಪೂರ ಹಾರಡಿ..
ಬೇಸತ್ತಿದೆ ದೇಹಪೂರ ನೀರಾಡಿ..(2)
ಕೇಳುವರಾರು ಈ ಕಾಗೆಯ ಕೂಗು..?(2)
ಹಸಿವಿನ ಹಾಸಿಗೆಯಲ್ಲಿ ಮಲಗಿ..(2)
ದಾರಿ ಕಾಣದೆ ಪಟ್ಟಣಕ್ಕೆ ನುಗ್ಗಿ..
ದೇಹ ತೆತ್ತಿವೆ ವಿದ್ಯುತ್ಕಂಬಕೆ ತಾಗಿ..
ಆದರೂ ಕರಗಲಿಲ್ಲ ಮಾನವ ಜೋಗಿ..(2)
ಕೇಳುವರಾರು ಈ ಕಾಗೆಯ ಕೂಗು..?(2)
***************************************
✍️ಕೀ.ಕೆ
ಬೆಂಗಳೂರು
Please contact through,
Email- keerthankeeru2001@gmail.com
Ph No.- 9743104743

Comments