ನಮ್ಮ ಅಂಜದ ಅಜ್ಜ
©All Rights reserved by Myunsungpoetry.blogspot.com
Ref no :- MUP/11062023/38
****************************************
ಬಾಗಿದ ಬೆನ್ನ ಹೊತ್ತಿಕೊಂಡು
ವಯಸ್ಸಾದ ದೇಹ ಹೇರಿಕೊಂಡು|2|
ಊರಿಂದೂರ ಸುತ್ತಿಕೊಂಡು
ಬಾಲ್ಯದ ಪುಟವ ತೀರಿವುಕೊಂಡು
ಹದಿನೆಂಟರ ಹರೆಯನಂತೆ ನಡೆವ ದೀರ|2|
ನಮ್ಮ ಅಂಜದ ಅಜ್ಜ.
ಅರಿದ ಮುರಿದ ಬಟ್ಟೆ ಹಾಕಿಕೊಂಡು
ಹೊಡೆದ ಕನ್ನಡಕ ಸರಿಸಿಕೊಂಡು|2|
ಕಾಣದ ಕಣ್ಣ ವಸುಕಿಕೊಂಡು
ಉದರುವ ಪಂಚೆಯ ಮುದುಡಿಕೊಂಡು
ಊರಗೋಲಲಿ ಲೋಕ ಕಂಡ ಸೂರ|2|
ನಮ್ಮ ಅಂಜದ ಅಜ್ಜ.
ಮೊಮ್ಮಕ್ಕಳ ಮರಿಮಕ್ಕಳೊಡನೆ ಆಡಿಕೊಂಡು
ಗಾದೆ ಮಾತಲಿ ಜಗತ್ತನ್ನು ತಿದ್ದಿಕೊಂಡು|2|
ಅರಳಿ ಮರದಡಿ ಹರಟೆ ಹೊಡೆದುಕೊಂಡು
ಎಲೆ-ಅಡಕೆ ದಿನಪೂರ ಜಿಗಿದುಕೊಂಡು
ಸುಖ ನಿದ್ರೆಗೆ ಜಾರುವ ಜಾದೂಗಾರ|2|
ನಮ್ಮ ಅಂಜದ ಅಜ್ಜ.
****************************************
✍️ಕೀ.ಕೆ
ಬೆಂಗಳೂರು
We heartly welcome your suggestions.
Please contact through,
Email- keerthankeeru2001@gmail.com
Ph No.- 9743104743

Comments