ನನ್ನಪ್ಪ

©All Rights reserved by Myunsungpoetry.blogspot.com
Ref no :- MUP/18062023/40

*************************************

ನಿನಗಾಗಿ ಏನೂ ಅಪೇಕ್ಷಿಸಿದೆ 

ದುಡಿದು ದಣಿದಿರುವೆ ನಮಗಾಗಿ,(2)

ನಮ್ಮ ಖುಷಿಯಲ್ಲಿ ನೀ ತೃಪ್ತನಾದೆ

ಮನಸ್ಸಲ್ಲೇ ನಮಿಸುವೆ ಶಿರಬಾಗಿ..(2)


ಹೆಣೆದಿರುವೆ ಸಾಲು ಕನಸುಗಳ

ನಾಳೆಯ ನನ್ನ ಬದುಕಿಗಾಗಿ,(2)

ಪೂರೈಸಲು ಜನುಮ ಸಾರ್ಥಕ

ಹುರಿದುಂಬಿಸು ನೀ ಬಲವಾಗಿ.(2)


ನಾ ನೊಂದರೆ ನೀ ಮರುಗುವೆ

ಅದೃಷ್ಟಳು ನಾ ನಿಜವಾಗಿ,(2)


ಗುರುವಾಗಿ ತಿದ್ದಿಸಿ

ತಪ್ಪನ್ನು ಮನ್ನಿಸಿ

ಪ್ರೀತಿಯಿಂದ ಮುದ್ದಿಸಿ 

ನೆರಳಾಗಿರುವೆ ನೀ ಮರವಾಗಿ.(2)


ಸವೆದಿರವೆ ಕಷ್ಟಗಳೊಡನೆ

ಹೋಗಲಿ ಕಹಿ ಕ್ಷಣಗಳು ಮರೆಯಾಗಿ,(2)

ನಿನಗೆ ನೀನೆ ಸರಿಸಾಟಿ ಹೇಳುವೆ

ಹೆಮ್ಮೆಯಿಂದ ಬೀಗಿ, ಕೂಗಿ.(2)

***************************************

✍️ಮೇಘ
ಬೆಂಗಳೂರು.







Wheartly welcome your suggestions.
Please contact through,
Ph No.9743104743

Comments

Anonymous said…
Very nice lines madam

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!