ಉದಯಿಸು ಸೂರ್ಯ ಕಿರಣ.
©All Rights reserved by Myunsungpoetry.blogspot.com
Ref no :- MUP/20102023/43
****************************************
ಅಣು-ಅಣು ನೆನೆದು
ಸುಪ್ರಭಾತ ಸಾರುತ್ತಿದೆ,
ಉತ್ತ ಭೂಮಿ, ಬಿತ್ತ ಬೀಜ
ನಿನ್ನಗಾಗಿ ಕಾಯುತ್ತಿದೆ,
ನೀ ಉದಯಿಸು ಸೂರ್ಯ ಕಿರಣ.
ಮುಂಜಾನೆ ಮಬ್ಬಲಿ
ಕಣ್ಣುಗಳು ಅಂಧವಾಗಿದೆ,
ಆಲೋಚನೆ ಹಗಲಿ
ಮನುಕುಲ ಮೈ ಮರೆತಿದೆ,
ನೀ ಉದಯಿಸು ಸೂರ್ಯ ಕಿರಣ.
ಸಾವಿಲ್ಲವೆಂದು ಯುವಜನತೆ
ಸಮಯದ ಮಾನ ಕಳೆದಿದೆ,
ಗುರಿ ಅಲ್ಲದ ಗಿರಿ ಏರಿ
ಗರಬಡಿದ ಗರುಡನಂತೆ ದುಮುಕಿದೆ
ನೀ ಉದಯಿಸು ಸೂರ್ಯ ಕಿರಣ.
****************************************
![]() |
✍️ಕೀ.ಕೆ ಬೆಂಗಳೂರು |


Comments