ಮರೆಯದ ಮರಿಚಿಕೆ.!

©All Rights reserved by Myunsungpoetry.blogspot.com
Ref no :- MUP/14022024/47
****************************************
ನಿನ್ನ ಕಂಡ ಕಣ್ಣಿಗೆ ನಿನ್ನದೆ ಕನವರಿಕೆ-ಕನವರಿಕೆ
ನೀ ಕಂಡು ಕಾಣೆಯಾದ ಕ್ಷಣವೇ ಮತ್ತೆ ಕಾಣುವ ಬಯಕೆ
ನೋಡಿ-ನೋಡಿ ಆ ನಿನ್ನ ಮುದ್ದು ಮೊಗದ ನಾಚಿಕೆ
ನನ್ನ ಮನ ಹೊತ್ತಿದೆ ನಿನ್ನ ಪಡೆಯುವ ಹರಕೆ
ಓ ನನ್ನ ಮರೆಯದ ಮರಿಚಿಕೆ, ಮರಿಚಿಕೆ.!

ನವಿಲು ನಾಟ್ಯದಂತ ಆ ನಿನ್ನ ಕಣ್ಣೋಟಕ್ಕೆ 
ಅಳುವ ಮನವು ಅರಳಿ ಜಿಗಿಯುವುದು ಆಗಸಕ್ಕೆ 
ನಿನ್ನ ಅರಿತು ಅನುಕ್ಷಣ ನೆನೆದರೆ ಈ ಉಚ್ಚು ಮನಕ್ಕೆ 
ಸದ್ದಿಲ್ಲದೆ ಸಾವಿರ-ಸಾವಿರ ಕನಸು ಕಟ್ಟುವ ಬಯಕೆ
ಓ ಕೇಳು ನನ್ನ ಮರೆಯದ ಮರಿಚಿಕೆ- ಮರಿಚಿಕೆ.!

ಬರದ ಬವಡೆಯಲ್ಲಿದ್ದ ನನ್ನೀ ಆತ್ಮಕ್ಕೆ 
ಛಲದ ಚೈತನ್ಯ ತಂದಿದೆ ನಿನ್ನ ಜೊತೆಗಾರಿಕೆ
ಬದುಕಲು ಬಲ-ಬೆಂಬಲ ನಿನ್ನೆ ಈ ಮನಕ್ಕೆ 
ಸೋತು ನಾ ಒಲಿದಿರುವೆ ನಿನ್ನ ಒಳ್ಳೆ ತನಕ್ಕೆ 
ಕೇಳು ನನ್ನ ಮರೆಯದ ಮರಿಚಿಕೆ-ಮರಿಚಿಕೆ.!
****************************************
✍️ಕೀ.ಕೆ
ಬೆಂಗಳೂರು 







Comments

Surya said…
Kalegaara guru neenu
😜 said…
Valentine's Day special
Sharan said…
Chandh barithiya maraya
ಜೀವಕ್ಕೆ ಭಾವ ಅಂಟಿದೆ 😍 bro
Keerthan K K said…
Thank you all for your support
Keerthan K K said…
Thanks for your comments😊. But this is fiction poetry

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!