ಓ ಬಾಲೆ..!
*************************************
ನಿನ್ನ ಅರಿತ ಅನು ಕ್ಷಣದಿಂದಲೆ
ಮನಸಲ್ಲಿ ಹುಟ್ಟಿದೆ ಛಲದ ಅಲೆ
ಬದುಕಿಗೆ ಆ ನಿನ್ನ ಸ್ಪರ್ಶವೆ ಜ್ವಾಲೆ
ಕಣ್ಣೋಕ್ಕಿದೆ ನಿನ್ನ ನಗುಮೊಗ ಶಿಲ್ಪಕಲೆ
ಓ ಕೇಳು ಬಾಲೆ..!
ಕಳೆದದ್ದೆನೋ ಕ್ಷಣ ಸಮಯ ಒಟ್ಟಿಗೆ
ಆದರೆ ನೀ ನೀಡಿದ ಆ ಮೂಕ ಒಪ್ಪಿಗೆ
ನನಗೆ ಸಿಕ್ಕ ಮರೆಯಲಾಗದ ಕೊಡುಗೆ
ನೀ ತಡಮಾಡದೆ ಸೇರು ಈ ತೊಳಿಗೆ
ಓ ನನ್ನ ಬಾಲೆ..!
ದಣಿದು ದಾರಿ ಹುಡುಕುತ್ತಿದ್ದೀ ಮನಕ್ಕೆ
ಹುಟ್ಟಿದೆ ಬೆಂಬಲ ನೀಡುವೆಯಂಬ ನಂಬಿಕೆ
ಮತ್ತೆ ಮತ್ತೆ ದೂಡಬೇಡ ನನ್ನ ಗೊಂದಲಕ್ಕೆ
ನಾ ಹೊರಲೆ ನಿನ್ನ ಪಡೆಯುವ ಹರಕೆ
ಓ ಹೇಳು ಬಾಲೆ..!
****************************************


Comments