ಮತ್ತೇಕೆ ನೀ ಕರೆದೆ.!

©All Rights reserved by Myunsungpoetry.blogspot.com
Ref no :- MUP/19122025/61
*************************************
ಮತ್ತೇಕೆ ನೀ ಕರೆದೆ ಕವಿತೆಯಲೆ ನಿನ್ನ ನೆನೆದೆ
ನೂರೆಂಟು ಭಾವನೆಯ ಮನದೊಳಗೆ, (2)
ನೀನಿರದ ಒತ್ತಿನಲಿ ನೆನಪಿನ ಕಿಡಿಯೊಂದು
ನಿದ್ದೆಯಲು ನೆಮ್ಮದಿಯ ಕೆಡಿಸಿದೆ.! (2)

ಕಾಯುವ ತವಕದಲಿ ತನ್ನನ್ನೆ ಮರೆತ್ತಿರುವೆ
ನಿನ್ನಯ ನಾಚುಗೆಯ ಮೊಗ ನೆನೆದು, (2)
ಬೇರೇನೂ ಬೇಕಿದೆ ನೀನಿರದೆ ಇಂದು
ಭಾವನೆಯು ಭಯದಲ್ಲೆ ಬದುಕಿದೆ..! (2)

ಕಳೆದ ಕ್ಷಣಗಳಿಂದು ಕನಸುಗಳ ಕಟ್ಟುತ್ತಿದೆ
ಸಾಗಲು ನಿನ್ನೊಡನೆ ಬಲೂದೂರ, (2)
ಕೈಯಿಡಿದು ನಡೆಸುವೆ, ಕಣ್ಣಾಗಿ ಕಾಯುವೆ
ನೀ ಒಪ್ಪಿ ಬಂದರೆ ನಾ ಅಮರ.!

************************************
𝐊𝐞𝐞𝐫𝐭𝐡𝐚𝐧 𝐊 𝐊



Comments

Sharath said…
Very beautiful lines

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!