Posts

Showing posts with the label poem on life

Heart Never tell lie

Image
  ©All Rights reserved by  Myunsungpoetry.blogspot.com R ef no :- MUP/07052023/35 ************************************* H eart never tell lie, You are disturbing me why?(2) for all my pleasure you are joy, I believe we should be in sky.!(2) Heart never tell lie, I'm always your boy,(2) never ever you should cry, life is only platform for enjoy.!(2) Heart never tell lie, don't be with me shy,(2) don't get for anything annoy, lets join together brave.! *************************************** ✍️Keerthan K K Bangalore. #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ನನ್ನಲ್ಲೇ ಉಳಿದ ಮಾತು..!

Image
ನನ್ನಲ್ಲೇ ಉಳಿದ ಮಾತು..! ©All Rights reserved by  Myunsungpoetry.blogspot.com Ref no :- MUP/21082022/20 **************************************** ನೆ ನೆಯುವುದೆಲ್ಲ ನಡೆಯುವುದಿಲ್ಲ... ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು? ಕಾಣದಾಚೆಗೆ ಕನಸು ಕಟ್ಟಿ... ಆಶ್ವಾಸನೆಯ ಬೀಜ ಬಿತ್ತಿ... ಕಲ್ಪನೆಗೆ ಜೀವ ತೆತ್ತಿ... ಹೊಳೆಯುವುದೆಂತು ನನ್ನ   ಶ್ರಮದ ಕಾಂತಿ? ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ... ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ... ಭ್ರಮೆಯ ಬದುಕು ವಾಸ್ತವವಲ್ಲ... ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!! ✍️ಮೇಘ ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮಾಯದ ಕುದುರೆಯು ಮೈಯೆರಿ.!

Image
ಮಾಯದ ಕುದುರೆಯು ಮೈಯೆರಿ.! ©All Rights reserved by Myunsungpoetry.blogspot.com Ref no :- MUP/09082022/18 **************************************** ಮಾ ಯದ ಕುದುರೆಯು ಮೈಯೆರಿ ಭಾವನೆಯ ಒಡಲ ಪಾತಾಳಕ್ಕಿಳಿಸಿದೆ ಮೌನವ ಕದಡಿ ಕತಕಳಿ ಆಡಿಸುತ್ತಿದೆ ಇದನರಿಯದೆ ಯೌವನ ಹುಚ್ಚುನಂತೆ ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.! ಮಾಯದ ಕುದುರೆಯು ಮೈಯೆರಿ ಮಡಿಯೊತ್ತ ಮನಸನು ಮಲಿನ ಮಾಡಿ ಚಲವಿತ್ತ ಪೌರುಷವ ಹುಸಿಮಾಡಿ ಭರವಸೆಯ ಕಡಲನು ಬರಿದುಮಾಡಿ ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.! ಮಾಯದ ಕುದುರೆಯು ಮೈಯೆರಿ ಸಂಬಂಧದ ಬಂಧಗಳ ಕದಡಿ ಹಸಿರೊದ್ದ ಆಲೋಚನೆಯ ಬಂಜೆ ಮಾಡಿ ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ  ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.! ಮಾಯದ ಕುದುರೆಯು ಮೈಯೆರಿ ಕಾಮನ ಲೋಕಕೆ ಕರೆತಂದಿದೆ ಮೋಹದ ಮರಳನು ಹೆರಚುತ್ತಿದೆ ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ ಅರಿವಿನ ಹಗಲಲು ಕುರುಡರಂತಾಗಿಸಿ.. ಮಾಯದ ಕುದುರೆಯು ಮೈಯೆರಿ.. ಬೆನ್ನತ್ತ ಬೇತಾಳದಂತೆ ಹೆಗಲೇರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜...

ನೆಚ್ಚಿನ ಗುರು

Image
  ನೆಚ್ಚಿನ ಗುರು **************************************** ಅ ರಿವೇ ಗುರುವೆನ್ನುವರು ಗುರುವಿಲ್ಲದೆ ಅರಿವು ಸಾಧ್ಯವೇ? ನನ್ನ ನೆಚ್ಚಿನ ಗುರುವು ದೈವವೇ ಸರಿ  ಅದಕ್ಕೆ ಇರಬೇಕು ನೋಡಿದೊಡನೆ ವಿನಮ್ರಳಾಗಿ ನಿಲ್ಲುವೆ! ಅಂಧಕಾರದಿಂದ ಜ್ಞಾನದ ಬೆಳಕಿಗೆ ಕರೆದೊಯ್ಯುವ ಗುರುವೆ ನನ್ನ ಅರಿವು! ಚಿರವಾಗಲಿ ನನ್ನ ಗುರುವಿನ ಕಾಯಕ  ಅಪೇಕ್ಷೆಯಿಲ್ಲದ ನಿಸ್ವಾರ್ಥ ಪಾಠವು! ಕಾಣಸಿಗುವುದೇ ಹುಲು ಮಾನವನಿಗೆ ತ್ರಿಮೂರ್ತಿಗಳ ದರ್ಶನ! ಹೀಗಾಗಿಯೇ ಹೇಳಿರಬೇಕು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಹ!  ಗುರುವಿಗೆ ಗುಲಾಮನಾಗುವವರೆಗೂ ಸಿಗಲಾರದಯ್ಯ ಮುಕುತಿ! ಎಂದಿಗೂ ಶಾಶ್ವತ ನಿನ್ನ ಮೇಲಿನ ಭಕುತಿ ಜ್ಞಾನದ ಕಣಜವೇ ನೀನು ನನ್ನಯ ಪಾಲಿಗೆ ನೀನೆ ಕಾಮಧೇನು!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ..!

Image
ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ.. ************************************** ** ಹೇ ಹೃದಯವೇ  ಏಕೆ ಕೊಲ್ಲುವೆ ನನ್ನನ್ನಾ  ಪ್ರತಿ ಕ್ಷಣ ಮಾಡಿ ಅವನ ನೆನಪನ್ನಾ ಬೇಕಾದರೇ ನಿಲ್ಲಿಸಿಬಿಡು ನಿನ್ನ ಬಡಿತವನ್ನ  ನೆನೆದು ನೆನೆದು ಮಾಡದಿರು ಮನಕೆ ನೋವನ್ನಾ ಹೇ ಹೃದಯವೇ  ನೋಡುವ ಹಂಬಲಕೆ ಸಾಂತ್ವಾನ ಹೇಳದಿರು ಇನ್ನೇನು ಮನದ ನೋವೆ ತಿಳಿಸಿದೆ ಎಲ್ಲವನು ಸಮಾಧಿ ಮಾಡಿ ನಿನ್ನೇಲ್ಲಾ ಭಾವನೆಗಳನು ಅರಿಯದೆ ಹೋದೆಯಾ ಮುಂದಿನ ದಿನಗಳನು... ಹೇ ಹೃದಯವೇ  ನೋವಿನಾ ಪ್ರೀತಿಯ ತಪ್ಪಿಗೆ ಕ್ಷಮಿಸೆನ್ನಾ ತಿಳಿಯದಾದೆನೆ ಪ್ರೀತಿಯ ಮೋಸವನ್ನಾ  ಇಷ್ಟಾದರೂ ನಾ ಮರೆವೆನೆ ಅವನನ್ನಾ  ಜೀವ ಇರುವರೆಗೂ ಪ್ರೀತಿಸುವೆ ನಿನ್ನಲ್ಲೇ ಬಚ್ಚಿಟ್ಟು ನನ್ನ ಇನಿಯನನ್ನಾ..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಉತ್ತರ ಸಿಗದ ಬದುಕು..!

Image
ಉತ್ತರ ಸಿಗದ ಬದುಕು..! **************************************** ಕ ತ್ತಲೆ ತುಂಬಿದ ಬದುಕಲ್ಲಿ  ಪ್ರಶ್ನೆಗಳ ಸುರಿಮಳೆ ಮನದಲ್ಲಿ  ದಾರಿ ಕಾಣದೆ ಅಲ್ಲಲ್ಲಿ  ತಡವರಿಸಿ ಬೆಳಕನು ಹುಡುಕುತ  ಕರಿಗತ್ತಲಲ್ಲಿ   ದೂರದ ತಟದಲ್ಲಿ  ನಂದಾದೀಪವು ಕಾಣಲು  ಮನ ಸಂತೋಷದಿಂದಿರಲು..! ತುಸು ಬೀಸಿ ಬಂದ ಪಿಸುತಂಗಾಳಿ ಆವರಿಸಿರಲು  ಮನ ಭಯದಿ ತುಂಬಿರಲು ಮನ ಕೂಗಿ ಕರೆದರೂ  ಕಂಡು ಕಾಣದೆ  ತಣ್ಣನೆ ಬೀಸಿ ದೀಪವ ನಂದಿಸಿರಲು  ಮರು ಮಾತಾಡದೆ ಮಾಯವಾಯಿತು ಬೆಳಕ ಕಾಣದೆ ಮನ ನಿಂತಲ್ಲೇ ಮಂದವಾಯಿತು... ಮನದಿ ಉತ್ತರವೇ ಸಿಗದಂತಾಯಿತು..!       Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇