ಮಾಯದ ಕುದುರೆಯು ಮೈಯೆರಿ.!
ಮಾಯದ ಕುದುರೆಯು ಮೈಯೆರಿ.!
©All Rights reserved by Myunsungpoetry.blogspot.com
Ref no :- MUP/09082022/18
****************************************
ಮಾಯದ ಕುದುರೆಯು ಮೈಯೆರಿ
ಭಾವನೆಯ ಒಡಲ ಪಾತಾಳಕ್ಕಿಳಿಸಿದೆ
ಮೌನವ ಕದಡಿ ಕತಕಳಿ ಆಡಿಸುತ್ತಿದೆ
ಇದನರಿಯದೆ ಯೌವನ ಹುಚ್ಚುನಂತೆ
ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.!
ಮಾಯದ ಕುದುರೆಯು ಮೈಯೆರಿ
ಮಡಿಯೊತ್ತ ಮನಸನು ಮಲಿನ ಮಾಡಿ
ಚಲವಿತ್ತ ಪೌರುಷವ ಹುಸಿಮಾಡಿ
ಭರವಸೆಯ ಕಡಲನು ಬರಿದುಮಾಡಿ
ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.!
ಮಾಯದ ಕುದುರೆಯು ಮೈಯೆರಿ
ಸಂಬಂಧದ ಬಂಧಗಳ ಕದಡಿ
ಹಸಿರೊದ್ದ ಆಲೋಚನೆಯ ಬಂಜೆ ಮಾಡಿ
ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ
ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.!
ಮಾಯದ ಕುದುರೆಯು ಮೈಯೆರಿ
ಕಾಮನ ಲೋಕಕೆ ಕರೆತಂದಿದೆ
ಮೋಹದ ಮರಳನು ಹೆರಚುತ್ತಿದೆ
ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ
ಅರಿವಿನ ಹಗಲಲು ಕುರುಡರಂತಾಗಿಸಿ..
ಮಾಯದ ಕುದುರೆಯು ಮೈಯೆರಿ..
ಬೆನ್ನತ್ತ ಬೇತಾಳದಂತೆ ಹೆಗಲೇರಿ..!
✍️ಕೀ.ಕೆ
ಬೆಂಗಳೂರು
***************************************
#Myunsungpoetry.blogspot.com#
I Heartly welcome your suggestions.
Please contact through,
E-mail ID- keerthankeeru2001@gmail.com
Ph No. - 9743104743


Comments