Posts

ಕಾಗೆಯ ಕೂಗು..!

Image
  Image credit:- https://unsplash.com/@jessevanvliet ©All Rights reserved by  Myunsungpoetry.blogspot.com R ef no :- MUP/21052023/37 ************************************* ಸೂರ್ಯೋದಯವ ಕಂಡು..(2) ಉಡುಕುತ ಆಹಾರದ ಹಿಂಡು.. ಹೊರಟಿದೆ ಕಾಗೆಗಳ ದಂಡು.. ಸಿಗದೆ ಜಾಡು ಸೇರಿವೆ ಗೂಡು..(2) ಕೇಳುವರಾರು ಈ ಕಾಗೆಯ ಕೂಗು..? (2) ಕಾಡಿನಲ್ಲಿ ಕೂಗಾಡಿ..ಕೂಗಾಡಿ.. (2) ಸಂಗಡಿಗರೊಡನೆ ಹೋರಾಡಿ..  ದಿನಪೂರ ಹಾರಡಿ.. ಬೇಸತ್ತಿದೆ ದೇಹಪೂರ ನೀರಾಡಿ.. (2) ಕೇಳುವರಾರು ಈ ಕಾಗೆಯ ಕೂಗು ..? (2) ಹಸಿವಿನ ಹಾಸಿಗೆಯಲ್ಲಿ ಮಲಗಿ.. (2) ದಾರಿ ಕಾಣದೆ ಪಟ್ಟಣಕ್ಕೆ ನುಗ್ಗಿ.. ದೇಹ ತೆತ್ತಿವೆ ವಿದ್ಯುತ್ಕಂಬಕೆ ತಾಗಿ.. ಆದರೂ ಕರಗಲಿಲ್ಲ ಮಾನವ ಜೋಗಿ.. (2) ಕೇಳುವರಾರು ಈ ಕಾಗೆಯ ಕೂಗು..? (2) *************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, Email-  keerthankeeru2001@gmail.com Ph No. -  9743104743

Am I laying down..?

Image
  ©All Rights reserved by  Myunsungpoetry.blogspot.com R ef no :- MUP/14052023/36 ************************************* H eart falling into well, Mind flying into hell, Without knowing caution bell, Soul thinking what I will, (2) am I laying down..? Dreams are blowing up, Responsibility acting like hump, Every thought seems like death rope, Might be i'm losing my hope,(2) am I laying down..? Age river flowing long away, Young time running fast away, Without heart having gateway, Rushing behind red bay, (2) am I laying down..? *************************************** ✍️Keerthan K K Bangalore 

Heart Never tell lie

Image
  ©All Rights reserved by  Myunsungpoetry.blogspot.com R ef no :- MUP/07052023/35 ************************************* H eart never tell lie, You are disturbing me why?(2) for all my pleasure you are joy, I believe we should be in sky.!(2) Heart never tell lie, I'm always your boy,(2) never ever you should cry, life is only platform for enjoy.!(2) Heart never tell lie, don't be with me shy,(2) don't get for anything annoy, lets join together brave.! *************************************** ✍️Keerthan K K Bangalore. #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ತಂಪಾದ ಸುಡುಬಿಸಿಲು..!

Image
  ತಂಪಾದ ಸುಡುಬಿಸಿಲು..! ©All Rights reserved by  Myunsungpoetry.blogspot.com R ef no :- MUP/21032023/34 ************************************* ಸುಡುತ್ತಿದೆ ನೆತ್ತಿಯ ಆ ಸೂರ್ಯ ಕಿರಣ, ಸಾಗುತ್ತಿದೆ ಹೆತ್ತವರ ನೆನೆದು ಪಯಣ, ಮರೆಸುತ್ತ ಕಹಿ ನೆನಪುಗಳ ಕಥನ, ಉದಯೋನ್ಮುಖ ಭಾವನೆಗೆ ನೀಡುತ್ತ ಜನನ, ಈ ತಂಪಾದ ಸುಡುಬಿಸಿಲು.! ಎತ್ತ ನೋಡಿದರು ಬೆತ್ತಲ ಭೂವಿ, ಗಾಳಿಯ ವೇಗಕ್ಕೆ ಕಿವುಡಾಗಿವೆ ಕಿವಿ, ನೆತ್ತಿಯ ಜಲಪಾತ ಸೃಷ್ಟಿಕರ್ತ ಆ ರವಿ, ನೆನಪಿಗೆ ಕೊಡುಗೆ ನೀಡಿದೆ ಈ ಬೆಟ್ಟದ ಸವಿ, ಈ ತಂಪಾದ ಸುಡುಬಿಸಿಲು..! ಹಾದಿಯೇ ಇಲ್ಲದ ಈ ಕಡುಬೆಟ್ಟದಲ್ಲಿ, ಕಂಡದ್ದು ಬರಿ ಬಂಡೆ-ಕಲ್ಲಿನ ಸಾಮ್ರಾಜ್ಯದ ಬೇಲಿ, ಕೇಳುತ್ತಿರುವುದೊಂದೆ ಪಕ್ಷಿಗಳು ಚಿಲಿಪಿಲಿ,  ಬಿಸಿ ಕಲ್ಲ ಮೇಲೆ ಆಡಿಸುತ್ತಿದೆ ಕಥಕಳ್ಳಿ, ಈ ತಂಪಾದ ಸುಡುಬಿಸಿಲು.! *************************************** ✍️ಕೀ.ಕೆ ಬೆಂಗಳೂರು  #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

Image
©All Rights reserved by  Myunsungpoetry.blogspot.com Ref no :- MUP/18032023/33 ************************************** » ನ ಗುತ್ತಲೆ  ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) ನಿನ್ನ ನೋವಿಗೆ ಕಾರಣವೇನು..? ನೀ ಕಾಣದೆ ಕದಡಿದೆ ಏನೋ ಬಾನು..? ನನ್ನ ಭಾವ ಬಯಲ ಮಾಡಲೇನು..? ಅಥವಾ ಮೂಕನಾಗಿ ಮಣ್ಣು ಸೇರಲೇನು..? ದಣಿದು ದಾರಿ ತಪ್ಪಿರುವೆ ನಾನು.? ಇಣುಕದ ತೀರವಾದೆ ಏನೋ ನೀನು..? --------------------------------------------------- ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) --------------------------------------------------- »ಮನದ  ಮಾತಾನೇಕೆ ಮಾಸುವೆ ನನ್ನಲ್ಲಿ.? ನಾ ಪದಗಳ ಸಂಚಾರಿ ಆದನೆ ನಿನ್ನ ಬಾಳಲ್ಲಿ.? ಹೇಳು ಏತಕೆ ನಾ ಕಾದಿರುವೆ ಇಲ್ಲಿ.? ಮನಸೊಂದು ಕರಗಿ ಕೂತಿದೆ ನಿನ್ನಲಿ ..! ನೀ ದೂರದ ಮಾತಾದರೆ ನನ್ನ ಬಾಳಲ್ಲಿ..? ನೇಣು ಬಿಗಿಯಲಿ  ಈ ಕವಿತೆ ನೆನಪಿನ ಕೊಂಬೆಯಲ್ಲಿ.! ನಗುತ್ತಲೆ  ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?(2) **************************************** ✍️ಕೀ.ಕೆ ಬೆಂಗಳೂರು

ಕೇಳಿಲ್ಲಿ ಈ ಭಾವುಕ ಭಾವನೆ..!

Image
ಕೇಳಿಲ್ಲಿ ಈ ಭಾವುಕ ಭಾವನೆ..! ©All Rights reserved by  Myunsungpoetry.blogspot.com Ref no :- MUP/14022023/32 ************************************** ಕೇ ಳಿಲ್ಲಿ... ಕನಸೊಂದು ರೆಕ್ಕೆ ಬಡಿಯುತ್ತಿದೆ, ಕಲರವ ಭಾವನೆಗೆ ಬಣ್ಣ ಹಚ್ಚುತ್ತಿದೆ, ಕಾಣದ ಈ ಹೃದಯಕೆ ಹರುಷ ನೀಡುತ್ತಿದೆ, ಹಾದಿಹರೆಯದ ಈ ಆದಿವಾಸಿಗೆ ಜೀವ ತುಂಬುತ್ತಿದೆ, ಕೇಳಿಲ್ಲಿ, ಈ ಭಾವುಕ ಭಾವನೆ.! ಕೇ ಳಿಲ್ಲಿ.... ಪದಗಳ ನದಿಯೊಂದು ಉಕ್ಕಿ ಹರಿಯುತ್ತಿದೆ, ನಕ್ಷತ್ರಗಳ ಹೊಳಪಿಗೆ ರೂಪಾ ನೀಡುತ್ತಿದೆ, ಕತ್ತಲಲ್ಲಿ ಕಡಲಿಗೆ ಮುತ್ತನಿಕ್ಕುತ್ತಿದೆ, ಈ ಕವಿಯ ಭಾವನೆಗೆ ಭವ್ಯ-ಬಂಧ ಅರಸಿದೆ, ಕೇಳಿಲ್ಲಿ, ಈ ಭಾವುಕ ಭಾವನೆ.! ಕೇ ಳಿಲ್ಲಿ.... ಮೌನದ ಆಣೆಕಟ್ಟು ತುಂಬಿ ಹರಿಯುತ್ತಿದೆ, ಕೂಡಿಟ್ಟ ಹನಿ-ಹನಿ ಮಾತುಗಳು ಹೊರ ಚಿಮ್ಮುತ್ತಿದೆ, ಪ್ರೀತಿಯ ಸ್ನೇಯಿತೆಗೆ ಕವಿತೆ ಕೆತ್ತುತ್ತಿದೆ, ದಾರಿ ಕಾಣದೆ ಈ ಮುಸ್ಸಂಜೆಯಲಿ ನಿನ್ನ ಸೇರುತ್ತಿದೆ, ಕೇಳಿಲ್ಲಿ, ಈ ಭಾವುಕ ಭಾವನೆ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ಕೋಮಲ ಕನ್ಯೆ..!

Image
©All Rights reserved by  Myunsungpoetry.blogspot.com Ref no :- MUP/23012023/31 ************************************** ಸಾ ರುವೆ ಸಾವಿರ ಭಾರಿ.. ನೆನೆಯುವೆ ನೂರು ಸಾರಿ.. ನೆನಪಿನ ದಾರಿಯಲಿ ಜಾರಿ.. ಎಡಬಿಡದೆ ನಿನ್ನನ್ನು ನಾ... ಕೋಮಲ ಕನ್ಯೆ...! ಬರೆದದ್ದು ಬರಿ ಪದವಲ್ಲ.. ನಾ ಹೇಳಿದ್ದು ಹಾಸ್ಯ ತುಣುಕುವು ಅಲ್ಲ.. ನಿನ್ನಯ ಗೆಳೆತನವೆ ಒಂದು ಸಿಹಿ ಬೆಲ್ಲ.. ನಾ ನಿನ್ನ ಸದ್ಗುಣಕೆ ಸೋತ ನಲ್ಲ... ಕೋಮಲ ಕನ್ಯೆ..! ಮಗುವಿನಂತಹ ನಿನ್ನ ಮನಸ್ಸಿಂದು.. ಕೊರಗುತ್ತಿವುದೆನೋ ನನ್ನ ಮಾತಿಗೆ  ನೊಂದು.. ತಿಳಿದು-ತಿಳಿಯದೆ ನಿನ್ನ ಮನಕದಡಿದೆ.. ಕ್ಷಮಿಸು ನನ್ನ ಕೋಮಲ ಕನ್ಯೆ..! ಅದೃಷ್ಟ-ಕಷ್ಟ ನಿಭಾಯಿಸಲು ನಾ ಸಿದ್ದ.. ನಿನ್ನ ಬೆಂಬಲವಿದ್ದರೆ ಇಲ್ಲ ಯಾವುದು ಅಸಾಧ್ಯ.. ಇದುವೆ ನನ್ನ ಮನಸಿನ ದೀರ್ಘ ಗದ್ಯ... ಕಾವುವೆ ನಿನ್ನಯ ಆಗಮನದ ಪದ್ಯ.. ನಾ ಸದಾ ಕೋಮಲ ಕನ್ಯೆ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ಮೋಹದ ಬಲೆಗೆ ಮೌನದ ಕಿಡಿ!

Image
  ಮೋಹದ ಬಲೆಗೆ ಮೌನದ ಕಿಡಿ! ©All Rights reserved by  Myunsungpoetry.blogspot.com Ref no :- MUP/16012023/30 ************************************** ಸಾ ಕೆಂದರು ಬಿಡದೆ ಸಮಯದೊಡನೆ ಬಡಿದಾಡಿ ಬಡಿದಾಡಿ.. ಮಾಂಕಾಗಿ ಮನ ಮೌನಕ್ಕೆ ಜಾರಿದೆ, ಅತಿಯಾಗಿ ಯೋಚಿಸಿ- ಯೋಚಿಸಿ ದಡಬಡನೆ ಕುಣಿದಾಡಿ ಕುಣಿದಾಡಿ... ಏಕಾಂಗಿಯಾಗಿ ಮನ ಕತ್ತಲಿಗೆ ಜಾರಿದೆ.! ಕಾಣದ ಕನಸನು ಕಣ್ಣಂಚ್ಚಲಿ ತರಿಸಿ, ಕಾಡಿಸಿ-ಕಾಡಿಸಿ ಉತ್ತುಂಗಕ್ಕೆ ಏರಿಸಿ, ರಾಶಿ-ರಾಶಿ ಯೋಜನೆಗಳ ರೂಪಿಸಿ ಚಿತ್ರಿಸಿ, ಆ ಪುಸ್ತಕದ ಪುಟವ ಕಣ್ಮರೆಯಾಗಿಸಿ, ಈಗ ಮಾಂಕಾಗಿ, ಏಕಾಂಗಿಯಾಗಿ ಕುಳಿತು, ಜಾರಿದೆ ಪ್ರೀತಿ ಮೋಹದ ಬಲೆಗೆ ಹುಡುಕುತ ಅವಳ ಹೃದಯದ ನಾಡಿ.. ಈ ಕವಿಯ ಮೌನದ ಕಿಡಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮಗ್ಗಲು ಮಾರಿ..!

Image
  ಮಗ್ಗಲು ಮಾರಿ..! Credit:- pinterest.com ©All Rights reserved by  Myunsungpoetry.blogspot.com Ref no :- MUP/01012023/29 ************************************** ಮ ಗ್ಗಲು ಮಾರಿ ನರವ್ಯೂಹದೊಳು ಸೇರಿ, ಗದ್ದಲಕೊಳಮಾಡಿದೆ ನೂರು-ಬಾರಿ, ಕಾಣದ ತೀರಕ್ಕೆ ಕರೆಯೋಲೆ ತೋರಿ, ನಮ್ಮೆಲ್ಲರ ತಲೆಯೋಳು ತೂರಿ-ತೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಯುವಜನತೆ ತೋರದೆ ದಾರಿ, ಬಿದ್ದಿಹರು ಅಂತರ್ಜಾಲದೊಳು ಕಾಲುಜಾರಿ..! ಬೆನ್ನತ್ತ ಬೇತಾಳದಂತೆ ಹೆಗಲ ಮೇಲೇರಿ, ಸಂಬಂಧ ಬರಿದುಮಾಡಿದ ಕ್ರೂರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ಆಲದ ಮರದಂತೆ ಕೈಯೋಳು ಬೇರೂರಿ, ಅರಿದು ಮೋರಿಸೇರುತ್ತಿದೆ ಸೃಜನತೆ ಸೋರಿ, ಹೊರಟಿದೆ ಕಾಲ್ಪನಿಕ ಲೋಕದೋಳು ಮನಸನು ಮಾರಿ, ಮಾನವನೇ,,, ನೀ ಸೃಷ್ಟಿಸಿದ ಹೆಮ್ಮಾರಿ, ಮೊಬೈಲ್ ಎಂಬ ಮಗ್ಗಲು ಮಾರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ನೀ ಮುಡಿದ ಮಲ್ಲಿಗೆ..!

Image
  ನೀ ಮುಡಿದ ಮಲ್ಲಿಗೆ..! ©All Rights reserved by  Myunsungpoetry.blogspot.com Ref no :- MUP/24122022/28 *************************************** ಬೋ ರ್ಗರೆವ ಆ ತೀರದ ಕಡೆಗೆ, ಕಗ್ಗತ್ತಲ ಮಿನುಗುವ ತಾರೆಗಳ ಬಳಿಗೆ, ಏಕಾಂತದಿ ಚಂದಿರನಿರುವ ಮುಗಿಲಿಗೆ, ನಿನ್ನ ಕರೆದೋಗುವಾಸೆ ಈ ಮನಸಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ಒಂಟಿತನದಿ ಮುಳಿಗಿದ್ದೀ ಬಾಳಿಗೆ, ಜೊತೆಯಾಗುವೆಯೆಂದು ಈ ತೊಳಿಗೆ, ಮನಸ್ಸು-ಕನಸಲಿ ನೀಡಿದೆ ನಿನಗೆ ಸಲುಗೆ, ಬರೆವ ಪದಗಳು ಕರೆದೋಯುತ್ತಿದೆ ನಿನ್ನ ಬಳಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ನಿನ್ನನ್ನೇ ಜಪಿಸುತ್ತಿರುವೆ ಪ್ರತಿಗಳಿಗೆ, ನೀ ನುಡಿದ ಪದಗಳೆ ಮೆಟ್ಟಿಲುಗಳು ಈ  ಸಾಲಿಗೆ, ನಿನ್ನ ಗೆಜ್ಜೆ ನಾದವೆ ತಾಳ ಈ ಕವಿತೆಗೆ, ಒಮ್ಮೆ ನೀಡುವೆಯ ತಬ್ಬಿಮುದ್ದಾಡಲು ಸಲುಗೆ, ಬಾಡುವ ಮೊದಲು ನೀ ಮುಡಿದ ಮಲ್ಲಿಗೆ..? ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇