Posts

Showing posts with the label poems

Heart Never tell lie

Image
  ©All Rights reserved by  Myunsungpoetry.blogspot.com R ef no :- MUP/07052023/35 ************************************* H eart never tell lie, You are disturbing me why?(2) for all my pleasure you are joy, I believe we should be in sky.!(2) Heart never tell lie, I'm always your boy,(2) never ever you should cry, life is only platform for enjoy.!(2) Heart never tell lie, don't be with me shy,(2) don't get for anything annoy, lets join together brave.! *************************************** ✍️Keerthan K K Bangalore. #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

ಹದಿಹರೆಯದ ಮನದಲಿ... ಕನಸಲಿ...!

Image
ಹದಿಹರೆಯದ  ಮನದಲಿ... ಕನಸಲಿ...! ©All Rights reserved by  Myunsungpoetry.blogspot.com Ref no :- MUP/23112022/25 *************************************** ಹದಿಹರೆಯದ  ಮನದಲಿ ನಿನ್ನದೆ ಧ್ಯಾನ..   ಕಾದು ಕಾದು ಕನವರಿಸುತ ಮೌನಿಯಾಗಿದೆ ಮನ.. ಜೊತೆಹಾಕಿದ ಹೆಜ್ಜೆಯ ಮೆಲುಕುಹಾಕುತ ಪ್ರತಿ ಕ್ಷಣ.. ಯಾರಿರಾದ ಹೊತ್ತಲಿ ನಿನ್ನ ನೆನಪಿಗೆ ಬಣ್ಣ ನೀಡುತಿದೆ ನನ್ನೀ ಕವಿಗುಣ.. ಈ ಹದಿಹರೆಯದ ಮನಸಲಿ.. ಕನಸಲಿ..! ನನ್ನೀ ತೋಳುಗಳ ಹೆಕ್ಕಿ ನಿನ್ನನಬ್ಬಿ ಮುದ್ದಾಡುವಸೆ.. ಈ ತುಂತುರು ಮಳೆಹನಿಯ ತಂಪಲಿ.. ತುಟಿಗಳ ಬಿಚ್ಚಿ ಭಾವನೆಯ ಕಡಲೊಡೆವಾಸೆ .. ನಿನ್ನ ಮನ ಒಪ್ಪರೆ ಈ ಬೆಳದಿಂಗಳ ಆಸರೆಯಲಿ.. ಈ  ಹದಿಹರೆಯದ  ಮನಸಲಿ.. ಕನಸಲಿ..! ಭಾವನೆ ಬರಿದಾಗಿ ಪದಗಳ ಬರವೆ ಬಂದರು.. ನೂರು ಮಂದಿ ನೂರೆಂಟು ನುಡಿದರು.. ನಿನ್ನನ್ನರಿತ ಈ ಮನಕೆ ನೀ ಚಿನ್ನದ ಅದಿರು.. ಪ್ರಣಯ ಪದಗಳ ವಜ್ರದ ಬಂದರು.. ನೀ..ನನ್ನೀ  ಹದಿಹರೆಯದ  ಸಮುದ್ರದ ಜೀವಂತ ಕಂದರು.. ಕಂದರು..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙?...

ಬೆಳಗಲಿ ಭಾಳು

Image
  ಬೆಳಗಲಿ ಭಾಳು..! *************************************** ©All Rights reserved by  Myunsungpoetry.blogspot.com Ref no :- MUP/24102022/24 *************************************** ಬೆ ಳಗಲಿ ಬಾಳು ಉಜ್ವಲಿಸುತ ಬಾನೆತ್ತರಕ್ಕೆ ಮುಂದೆ-ಮುಂದೆ ಸಾಗುತ್ತ-ಸಾಗುತ್ತ  ನೋಡುತ ನುಗ್ಗುತ್ತ ಬದುಕಿನ   ಏಳುಬೀಳನ್ನು  ಸಾಧನೆಯ ಸುವರ್ಣದಾದಿಯಲಿ ಬೆಳಗಲಿ ಬಾಳು..|2| ಬೆಳಗಲಿ ಬಾಳು ಸಾಟಿಯಿಲ್ಲದ ಸರದಾರನಂತೆ ಕೆಚ್ಚೆದೆಯದಿ ವೀರಶೌರ್ಯದಿ ಕತ್ತಲಲು ಬೆಳಕಿನ ಜಾಡು ಹುಡುಕುತ ಕಷ್ಟದ ಸಮಯದಲು ಮುಗುಳುನಗುತ ಬೆಳಗಲಿ ಬಾಳು..|2| ಬೆಳಗಲಿ ಬಾಳು ಮುಗಿಲೊಡೆದು ಮಳೆ ಭೋರ್ಗರೆದರೂ ಬೆಳಗುವ ಸೂರ್ಯ ಜ್ವಾಲೆಯಾಗಿ ಹುರಿದರೂ ಆಸರೆ ಹೊತ್ತ ಭೂ ಬಾಯ್ತೆರೆದರೂ  ನಂಬಿಕೆಯೆಂಬ ಕೊಂಬೆಯಲಿ ಬದುಕುತ್ತ  ಬೆಳಗಲಿ ಬಾಳು..|2| ಬೆಳಗಲಿ ಬಾಳು ತನ್ನವರು ಒಡ ಹುಟ್ಟಿದವರು ದೂರಸರಿದರು, ಧನವಿಲ್ಲದೆ ಜೇಬು ಬರಿದಾದರು, ಸೂರಿರದೆ ಬೀದಿ-ಬದಿ ತಿರುಗಿದರು ನಾಳೆಯೆಂಬ ಭರವಸೆಯ ಧೈರ್ಯದಿ  ಕನಸಿನ ಮೂಟೆ ಹೊತ್ತು  ಬೆಳಗಲಿ ಬಾಳು ಬೆಳಗಲಿ..|2| ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.co...

ಮಾಯದ ಕುದುರೆಯು ಮೈಯೆರಿ.!

Image
ಮಾಯದ ಕುದುರೆಯು ಮೈಯೆರಿ.! ©All Rights reserved by Myunsungpoetry.blogspot.com Ref no :- MUP/09082022/18 **************************************** ಮಾ ಯದ ಕುದುರೆಯು ಮೈಯೆರಿ ಭಾವನೆಯ ಒಡಲ ಪಾತಾಳಕ್ಕಿಳಿಸಿದೆ ಮೌನವ ಕದಡಿ ಕತಕಳಿ ಆಡಿಸುತ್ತಿದೆ ಇದನರಿಯದೆ ಯೌವನ ಹುಚ್ಚುನಂತೆ ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.! ಮಾಯದ ಕುದುರೆಯು ಮೈಯೆರಿ ಮಡಿಯೊತ್ತ ಮನಸನು ಮಲಿನ ಮಾಡಿ ಚಲವಿತ್ತ ಪೌರುಷವ ಹುಸಿಮಾಡಿ ಭರವಸೆಯ ಕಡಲನು ಬರಿದುಮಾಡಿ ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.! ಮಾಯದ ಕುದುರೆಯು ಮೈಯೆರಿ ಸಂಬಂಧದ ಬಂಧಗಳ ಕದಡಿ ಹಸಿರೊದ್ದ ಆಲೋಚನೆಯ ಬಂಜೆ ಮಾಡಿ ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ  ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.! ಮಾಯದ ಕುದುರೆಯು ಮೈಯೆರಿ ಕಾಮನ ಲೋಕಕೆ ಕರೆತಂದಿದೆ ಮೋಹದ ಮರಳನು ಹೆರಚುತ್ತಿದೆ ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ ಅರಿವಿನ ಹಗಲಲು ಕುರುಡರಂತಾಗಿಸಿ.. ಮಾಯದ ಕುದುರೆಯು ಮೈಯೆರಿ.. ಬೆನ್ನತ್ತ ಬೇತಾಳದಂತೆ ಹೆಗಲೇರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜...

ಚೆಲುವೆ ಚೆಲುವೆ...!

Image
  ಚೆಲುವೆ ಚೆಲುವೆ...! ****************************************** ನ ಗುವ ಚಂದರನಿಗೆ ನೀ ಬಾನರಸಿ ಹೊಳೆವ ನಕ್ಷತ್ರಗಳಿಗೆ ನೀ ಉರ್ವಶಿ, ಈ ಹೃದಯ ಕದ್ದಿರುವ ನನ್ನರಸಿ ಕವಿತೆಗಳಲು ಮೂಡುತ್ತಿವೆ ನಿನ್ನನರಸಿ ಬಯಸಿ ಚೆಲುವೆ.. ಚೆಲುವೆ..! ಬೆಳದಿಂಗಳ ಚಂದಿರನಂತೆ ಕಾಡುವೆ ಕಣ್ಣಲ್ಲಿ ಕನಸಲಿ.. ನಿನ್ನ ಸಹಪಾಠಿಗೆ ಸರಿಸಾಟಿಯಾರಿಲ್ಲ ಕಗ್ಗತ್ತಲಿನ ರಾತ್ರಿಯಲಿ.. ಸುರಿವ ಮಳೆಹನಿಯ ಪ್ರತಿ ತುಂತುರಿನಲಿ... ಬೀಸುವ ಆ ಬಿರುಗಾಳಿಯ ರಬಸದಲ... ಜುಳು ಜುಳು ಅರಿವ ಆ ಜಲಪಾತದಸಿರಿಯಲಿ ನೀ ಸನಿಹ ಬರುವೆ ನೆನಪಾಗುವೆ.. ಚೆಲುವೆ..ಚೆಲುವೆ..! ನೀ ನೆನಪಾದರು/ಆಗದಿದ್ದರು ಸರಿಹೆ.. ನನ್ನ ಕವಿತೆಗೆ ನೀ ಸ್ಫೂರ್ತಿ..! ನೀ ಬಳಿ ಬಂದರು/ಬಾರದಿದ್ದರು ಸರಿಹೆ.. ಈ ಹೃದಯಕೆ ನೀ ಮರೆಯಾಗದೆ ಅಳಿಯದೆ ಉಳಿಯುವೆ.. ಚೆಲುವೆ.. ಚೆಲುವೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಕಳೆದ ದಿನಗಳ ನೆನೆದು..!!

Image
  ಕಳೆದ ದಿನಗಳ ನೆನೆದು ************************************** ** ಮ ರುಕಳಿಸದ ಸಂತೋಷದ ದಿನಗಳ ನೆನೆದು  ಮನ ದುಃಖದ ದಿನವ ಮರೆತಿದೆ ಇಂದು  ಕಂಬನಿ ಕಣ್ಣಲ್ಲೇ ಮಾಯವಾಗಿ  ತುಸು ನಗುತಿರಲು  ಅಂದು ಬೇರೊಂದು ಮನ ಸಂತೈಸಿದ ದಿನವ ನೆನೆದು  ಮತ್ತೆ ಕಣ್ಗಳು ತುಂಬಿರಲು  ದೂರಾದ ಮನವೇಕೆ ಮನವೇ  ಕೂಗಿ ಕರೆದರೂ ಕನಸಲೂ ಹಿಂದಿರುಗದ ಮನವ ನೆನೆದು  ಮನಕೆ ಮನವೇ ಸಂತೈಸಿರಲು  ಕಳೆದ ದಿನಗಳ ನೆನೆದು ಸಂತಸದಿಂದಿರು  ಲೋಕವೇ ಎದುರಾದರು  ಯಾರೇ ದೂರಾದರು  ಮನಕೆ ಮನವೇ ನೀ ಮರೆಯದಿರು..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  974310474 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಆಲಿಸು ನನ್ನಯ ಹುಚ್ಚುಗವನ...!

Image
ಆಲಿಸು ನನ್ನಯ ಹುಚ್ಚುಗವನ... ******************************************** ಪ್ರೀತಿ ಎಂದೊಡನೆ ನೆನೆಯುವೆ ನಿನ್ನ, ನೆನೆದೊಡನೆ ಮನಕೆ ಖುಷಿಯ ದಿಬ್ಬಣ... ಅರಿಯದೆ ಜಪಿಸುವೆ  ನಿನ್ನ ಹೆಸರನ್ನ, ಆ ಕನವರಿಕೆಗೆ ಕೊಡು ಒಂದು ವ್ಯಾಖ್ಯಾನ... ನಿನ್ನ ನೋಡಲು ನಾಚುವವು ನಯನ, ಉಳಿಯಲು ಸಾಧ್ಯವೇ ಇರದೆ ನಿನ್ನೆಡೆಗೆ ಗಮನ... ಊಹೆಗು ಮೀರಿದೆ ನನ್ನ ಕನಸಿನ ಪಯಣ, ಒಂದೊಮ್ಮೆ ಆಲಿಸು ನನ್ನಯ ಹುಚ್ಚುಗವನ... ಹೀಗೂ ಇರಬಹುದೆ ಪ್ರೀತಿಯ ಯಾನ?? ಸದ್ಯಕ್ಕೆ ಕಲ್ಪನೆಯಲ್ಲೇ ಇದು ಚೆನ್ನ!! ಹೀಗೆ ಕುಳಿತುಬಿಡಲೇ ಕಲ್ಪಿಸುತಲೇ ಎಲ್ಲವನ್ನ?? ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಪ್ರೇರಣೆ ನೀನೆ ನನ್ನೊಳಗೆ.!

Image
ಪ್ರೇರಣೆ ನೀನೆ ನನ್ನೊಳಗೆ .! ************************************** ಕವಿತೆಯೊಳು ಹೊಕ್ಕಿ, ನನ್ನ ಮನದೊಳಗೆ ಸಿಕ್ಕಿ, ನೆನಪಿನ ಹಾದಿಯಲಿ ಪುನಃ-ಪುನಃ ಸಿಲುಕಿ, ನಗುವವಳು ನೀನೆ ನನ್ನೊಳಗೆ.! ಮಿನುಗುವ ಮೋಡದೊಳ ಎಕ್ಕಿ, ಪ್ರೀತಿಯ ಸಂಗೀತದೊಳು ಇಳುಕಿ, ಕ್ಷಣ-ಕ್ಷಣವೂ ಕಾಡುತ್ತಿರುವುದು ಹರುಷ ನೀಡುತ್ತಿರುವವಳು ನೀನೆ ನನ್ನೊಳಗೆ.! ನಾಳೆಯ ಕ್ಷಣಗಳನು ಮೆಲುಕು ಹಾಕಿ, ಛಲದಿಂದ ಬದುಕಲಿಂದು ಸಖಿ, ನನ್ನೊಡನೆ ಉಳಿದುಬಿಡು ಚಂದ್ರಮುಖಿ, ನನ್ನ ಜೀವನ ಪ್ರೇರಣೆವು ನೀನೆ,,, ಸಿಕ್ಕ ಅಮೂಲ್ಯ ವಜ್ರವು ನೀನೆ,,, ಪ್ರಣಾಸಕಿ ಪ್ರಣಾಸಕಿ ನನ್ನೊಳಗೆ.! ✍️ಕೀ.ಕೆ ಬೆಂಗಳೂರು. ************************************** #Myunsungpoetry.blogspot.com# I Heartedly welcome your suggestions. Please contact through, E-mail ID-  keerthankeeru2001@gmail.com Ph No.      -  9743104743