ಹದಿಹರೆಯದ ಮನದಲಿ... ಕನಸಲಿ...!
ಹದಿಹರೆಯದ ಮನದಲಿ... ಕನಸಲಿ...! ©All Rights reserved by Myunsungpoetry.blogspot.com Ref no :- MUP/23112022/25 *************************************** ಹದಿಹರೆಯದ ಮನದಲಿ ನಿನ್ನದೆ ಧ್ಯಾನ.. ಕಾದು ಕಾದು ಕನವರಿಸುತ ಮೌನಿಯಾಗಿದೆ ಮನ.. ಜೊತೆಹಾಕಿದ ಹೆಜ್ಜೆಯ ಮೆಲುಕುಹಾಕುತ ಪ್ರತಿ ಕ್ಷಣ.. ಯಾರಿರಾದ ಹೊತ್ತಲಿ ನಿನ್ನ ನೆನಪಿಗೆ ಬಣ್ಣ ನೀಡುತಿದೆ ನನ್ನೀ ಕವಿಗುಣ.. ಈ ಹದಿಹರೆಯದ ಮನಸಲಿ.. ಕನಸಲಿ..! ನನ್ನೀ ತೋಳುಗಳ ಹೆಕ್ಕಿ ನಿನ್ನನಬ್ಬಿ ಮುದ್ದಾಡುವಸೆ.. ಈ ತುಂತುರು ಮಳೆಹನಿಯ ತಂಪಲಿ.. ತುಟಿಗಳ ಬಿಚ್ಚಿ ಭಾವನೆಯ ಕಡಲೊಡೆವಾಸೆ .. ನಿನ್ನ ಮನ ಒಪ್ಪರೆ ಈ ಬೆಳದಿಂಗಳ ಆಸರೆಯಲಿ.. ಈ ಹದಿಹರೆಯದ ಮನಸಲಿ.. ಕನಸಲಿ..! ಭಾವನೆ ಬರಿದಾಗಿ ಪದಗಳ ಬರವೆ ಬಂದರು.. ನೂರು ಮಂದಿ ನೂರೆಂಟು ನುಡಿದರು.. ನಿನ್ನನ್ನರಿತ ಈ ಮನಕೆ ನೀ ಚಿನ್ನದ ಅದಿರು.. ಪ್ರಣಯ ಪದಗಳ ವಜ್ರದ ಬಂದರು.. ನೀ..ನನ್ನೀ ಹದಿಹರೆಯದ ಸಮುದ್ರದ ಜೀವಂತ ಕಂದರು.. ಕಂದರು..! ✍️ಕೀ.ಕೆ ಬೆಂಗಳೂರು *************************************** #Myunsungpoetry.blogspot.com# W e heartly welcome your suggestions. Please contact through, E-mail- keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙?...