ಅತೃಪ್ತ ಅಬಲೆಯ ಜೀವನ..!
ಅತೃಪ್ತ ಅಬಲೆಯ ಜೀವನ..!
******************************************
ಅರಿಯದ ವಯಸಲಿ ಮದುವೆಯ ದಿಬ್ಬಣ...
ಬಹುಬೇಗ ಬಂದಿತೆ ನೋವಿನ ಕಂಕಣ ...
ಕನಸೇ ಇಲ್ಲದ ನಿನ್ನ ಬರಿದಾದ ಜೀವನ...
ಹುಸಿಯಾಯಿತು ನಿನ್ನ ಹಸಿರಿನ ಪಯಣ!!!
ಹಗಲಿರುಳು ದುಡಿವೆ ನೀ ಮನೆಯಾಕಿಯಂತೆ....
ಹೆಸರಿಗಷ್ಟೇ ಒಡತಿ, ಉಳಿಯುದೇನಿಲ್ಲ ಮತ್ತೆ...
ಸಿಲುಕಿರುವೆ ನೀ ಬಂಧನಗಳ ಜೊತೆ...
ಉಳಿಯುದಾದರೊಂದೆ ಅದುವೆ ಚಿಂತೆ!!!
ಬಹುಬೇಗ ಬಂದಿತೆ ನೋವಿನ ಕಂಕಣ ...
ಕನಸೇ ಇಲ್ಲದ ನಿನ್ನ ಬರಿದಾದ ಜೀವನ...
ಹುಸಿಯಾಯಿತು ನಿನ್ನ ಹಸಿರಿನ ಪಯಣ!!!
ಹಗಲಿರುಳು ದುಡಿವೆ ನೀ ಮನೆಯಾಕಿಯಂತೆ....
ಹೆಸರಿಗಷ್ಟೇ ಒಡತಿ, ಉಳಿಯುದೇನಿಲ್ಲ ಮತ್ತೆ...
ಸಿಲುಕಿರುವೆ ನೀ ಬಂಧನಗಳ ಜೊತೆ...
ಉಳಿಯುದಾದರೊಂದೆ ಅದುವೆ ಚಿಂತೆ!!!
ಹಿಂದೆಂದೂ ಕಂಡಿರದ ಹಿಂಸಿಸುವ ಜನಗಳನೊಳಗೂಡಿ...
ಸೋಲುವೆ ನೀನು ಸಮಸ್ಯೆಗಳ ಬಡಿದಾಡಿ...
ನಿಲ್ಲದು ಈ ನಿನ್ನ ಒಬ್ಬಂಟಿಯ ಗಾಡಿ...
ನಿನ್ನವರಂತಿದ್ದರೂ ನಿನ್ನವರಲ್ಲ ನೀನೆ ಹೊರಬೇಕು ಬಾಳಿನ ಬಂಡಿ!!!
ಮುಗಿಯದು ನಿನ್ನ ಕಷ್ಟಗಳ ಪಯಣ...
ಬರುವವರೆಗೂ ಮುಕ್ತಿಯ ಆಗಮನ...
ಅನಿಸಿರಬೇಕು ನಿನದು ಅತೃಪ್ತ ಜೀವನ...
ಇರಬಹುದು ಇದಕ್ಕೆಲ್ಲಾ ವಿಧಿಯೇ ಕಾರಣ!!!


Comments