ಮಾಯದಲ್ಲಿ ಮಾಸುಹೋಗಿದೆ ಮನಸ್ಸು
ಮಾಯದಲ್ಲಿ ಮಾಸುಹೋಗಿದೆ ಮನಸ್ಸು ©All Rights reserved by Myunsungpoetry.blogspot.com Ref no :- MUP/30112022/26 *************************************** ಬಾ ಣದಂತ ಸಮಯದ ನಡು ಸಿಲುಕಿ.. ಬಿರುಗಾಳಿಯಂತ ಕೆಡುಕು ಮಾತಿಗೆ ನಲುಕಿ.. ಜಗತ್ತಿನ್ನೆಲ್ಲ ಆಗೂ -ಹೋಗುಗಳ ಕಡೆ ಇಣುಕಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಕಟಿಕರ ಕುಟೀರದಲ್ಲಿ ಸೇರಿ.. ಕಾಮಕ್ರೋಧದ ಬಲೆಯಲ್ಲಿ ತೂರಿ.. ಮೂಢನಂಬಿಕೆಯ ಜಾಲದಲ್ಲಿ ಜಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಲೋಕದ ಸರಿ-ತಪ್ಪುಗಳ ಹೆಗಲ ಮೇಲೇರಿ.. ಪ್ರೇಮಲೋಕವ ದಿನವು ನೆನೆದು ನೂರು ಬಾರಿ.. ಮರೆತು ತನ್ನ ಜೀವನದ ಸಾಧನೆಯ ದಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಆದರೂ ಎಲ್ಲೋ.......... ಭರವಸೆಯ ಕಿರಣ ಮನಸಲಿ ತೂರಿ.. ಗೆಲ್ಲುವ ಹಾದಿ ಹಿಡಿದಿದೆ ಗುರಿಯ ಕೋರಿ.. ಚಾಟಿಬೀಸುತ ಪಂಚೆದ್ರೀಯಗಳ ರಥವನ್ನೇರಿ.. ಕನಸಿನ ಕೋಟೆ ತಲುಪಲೊಂದೆ ಜೀವನವೆಂದು ತೋರಿ.!. ಮಾಯದಲ್ಲಿ ಮಾಸು ಹೋಗಿದ್ದ ಮನಸ್ಸು ಇಂದು ..! ✍️ಕೀ.ಕೆ ಬೆಂಗಳೂರು *************************************** #Myunsungpoetry.blogspot.com# W e heartly welcome your suggestions. Please contact through, E-mail- keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 ...