ಮೋಹವೋ..ದಾಹವೋ.. ನಾ ಕಾಣೆ.?

ಮೋಹವೋ..ದಾಹವೋ.. ನಾ ಕಾಣೆ.?

©All Rights reserved by Myunsungpoetry.blogspot.com
Ref no :- MUP/25092022/22
****************************************
ನಿಶ್ಶಬ್ದದ ರಾತ್ರಿಯಲಿ......
         ಶಯನದ ವೇಳೆಯಲಿ....
ನಿನ್ನ ನೆನಪಾಯಿತು ಹೃದಯದಲಿ
ಬಾನ ಚಂದಿರ ನಾಚಿ ನೀರಾದ ಕ್ಷಣದಲಿ
ತಾಣವೆ ಅಂಬರವೆಂದು ಮರೆತನು 
      ಧರೆಗೆ ಜಾರುವ ಆತುರದಲಿ......
ಇದು ಮಾಯೆಯೋ.....
         ನಿನ್ನಂದದ ಛಾಯೆಯೋ.....
ನಾ ಅರಿಯೇ ನನ್ನೆದೆಯ ಸಹಚರಿಯೇ 
      ನಾ ಕಂಡು ಬೆರಗಾದೆನಲ್ಲೇ 
  ಕನಸಿನ ಸಾಮ್ರಾಜ್ಯದ ಒಡತಿಯೇ.....

ಅಮವಾಸ್ಯೆಯ ಮಬ್ಬಿನಲಿ......
        ಸ್ವಪ್ನದ ಸಮಯದಲಿ....
ನಿನ್ನ ಸೊಬಗಿನ ಚಿತ್ರಣ ನಯನದಲಿ
ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ
ತನ್ನ ಕಾಯಕವೇ ಅರಿಯದಾದನು 
         ನಿನ್ನ ಸೇರುವ ಕಾತುರದಲಿ......
ಇದು ಮೋಹವೋ.....
         ಒಲವಿನ ದಾಹವೋ.....
ನಾ ಕಾಣೆನೇ ಜೀವದ ಗೆಳತಿಯೇ
ತಾಳದೆ ಸಂಮೋಹಿತನಾದೆನಲ್ಲೇ 
ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ.....
Anu ....✍🏻❣️
Bengaluru.






****************************************
We heartly welcome your suggestions.
Please contact through,
E-mail ID- keerthankeeru2001@gmail.com
Ph No.      - 9743104743
#Myunsungpoetry.blogspot.com#

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!