ಭವ್ಯವಾಗಲಿ ಭಯವು ನೀಗಲಿ.!
ಭವ್ಯವಾಗಲಿ ಭಯವು ನೀಗಲಿ.!
****************************************
©All Rights reserved by Myunsungpoetry.blogspot.com
Ref no :- MUP/25092022/23
****************************************
ಭವ್ಯವಾಗಲಿ ಭಯವು ನೀಗಲಿ
ನೂರು ತಿರುವು ಬಂದರು,
ಬಾಳಿಗೊಂದು ಭಾವವಿರಲಿ
ನಾಳೆಯೆOಬ ಪಥದಲಿ.!
ನೂರು ತಿರುವು ಬಂದರು,
ಬಾಳಿಗೊಂದು ಭಾವವಿರಲಿ
ನಾಳೆಯೆOಬ ಪಥದಲಿ.!
ಕೆಚ್ಚೆದೆಯದಿ ಕೇಸರಿಯನು
ತನು-ಮನದಲಿ ಅಡಗಲಿ,
ಶಾಂತಿ ಶುದ್ಧತೆ ಹೊಳಪು ಮೆರೆಯಲಿ
ಅಗ್ರಗಣ್ಯರ ಹೆಸರಲಿ.!
ಹಸಿರುಹೊದ್ದು ದೇಶ ಉಳಿಸಲು
ದೇಶಕಾಗಿ ನೆತ್ತರರಿಸಿ ಜೀವತೆತ್ತ
ವೀರಯೋಧರ ಭಾಳು ಹಸಿರಾಗಲಿ
ಹೆಸರು ಎಂದೆಂದೂ ಚಿರವಾಗಲಿ.!
ಸೂರ್ಯಚಂದ್ರರು ಇರುವವರೆಗೂ
ದೇಶ ಪ್ರೇಮದ ದೀಪಬೆಳಗಲಿ,
ಈ ಭೂಮಿ ತಾಯಿಯ ಮಡಿಲಲಿ
ಜ್ಞಾನವೆಂಬ ಬೆಳಕು ಚೆಲ್ಲಲಿ
ರಾಷ್ಟ್ರ ಬಂಧ ಸ್ಥಿರವಾಗಲಿ.!
✍️ಕೀ.ಕೆ
ಬೆಂಗಳೂರು
***************************************
#Myunsungpoetry.blogspot.com#
We heartly welcome your suggestions.
We heartly welcome your suggestions.
Please contact through,
E-mail- keerthankeeru2001@gmail.com
Ph No.- 9743104743


Comments