Posts

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

Image
ಮಾಯದಲ್ಲಿ ಮಾಸುಹೋಗಿದೆ ಮನಸ್ಸು ©All Rights reserved by  Myunsungpoetry.blogspot.com Ref no :- MUP/30112022/26 *************************************** ಬಾ ಣದಂತ ಸಮಯದ ನಡು ಸಿಲುಕಿ.. ಬಿರುಗಾಳಿಯಂತ ಕೆಡುಕು ಮಾತಿಗೆ ನಲುಕಿ.. ಜಗತ್ತಿನ್ನೆಲ್ಲ ಆಗೂ -ಹೋಗುಗಳ ಕಡೆ ಇಣುಕಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಕಟಿಕರ ಕುಟೀರದಲ್ಲಿ ಸೇರಿ.. ಕಾಮಕ್ರೋಧದ ಬಲೆಯಲ್ಲಿ ತೂರಿ.. ಮೂಢನಂಬಿಕೆಯ ಜಾಲದಲ್ಲಿ ಜಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಲೋಕದ ಸರಿ-ತಪ್ಪುಗಳ ಹೆಗಲ ಮೇಲೇರಿ.. ಪ್ರೇಮಲೋಕವ ದಿನವು ನೆನೆದು ನೂರು ಬಾರಿ.. ಮರೆತು ತನ್ನ ಜೀವನದ ಸಾಧನೆಯ ದಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಆದರೂ ಎಲ್ಲೋ.......... ಭರವಸೆಯ ಕಿರಣ ಮನಸಲಿ ತೂರಿ.. ಗೆಲ್ಲುವ ಹಾದಿ ಹಿಡಿದಿದೆ ಗುರಿಯ ಕೋರಿ.. ಚಾಟಿಬೀಸುತ ಪಂಚೆದ್ರೀಯಗಳ ರಥವನ್ನೇರಿ.. ಕನಸಿನ ಕೋಟೆ ತಲುಪಲೊಂದೆ ಜೀವನವೆಂದು ತೋರಿ.!. ಮಾಯದಲ್ಲಿ ಮಾಸು ಹೋಗಿದ್ದ ಮನಸ್ಸು ಇಂದು ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 ...

ಹದಿಹರೆಯದ ಮನದಲಿ... ಕನಸಲಿ...!

Image
ಹದಿಹರೆಯದ  ಮನದಲಿ... ಕನಸಲಿ...! ©All Rights reserved by  Myunsungpoetry.blogspot.com Ref no :- MUP/23112022/25 *************************************** ಹದಿಹರೆಯದ  ಮನದಲಿ ನಿನ್ನದೆ ಧ್ಯಾನ..   ಕಾದು ಕಾದು ಕನವರಿಸುತ ಮೌನಿಯಾಗಿದೆ ಮನ.. ಜೊತೆಹಾಕಿದ ಹೆಜ್ಜೆಯ ಮೆಲುಕುಹಾಕುತ ಪ್ರತಿ ಕ್ಷಣ.. ಯಾರಿರಾದ ಹೊತ್ತಲಿ ನಿನ್ನ ನೆನಪಿಗೆ ಬಣ್ಣ ನೀಡುತಿದೆ ನನ್ನೀ ಕವಿಗುಣ.. ಈ ಹದಿಹರೆಯದ ಮನಸಲಿ.. ಕನಸಲಿ..! ನನ್ನೀ ತೋಳುಗಳ ಹೆಕ್ಕಿ ನಿನ್ನನಬ್ಬಿ ಮುದ್ದಾಡುವಸೆ.. ಈ ತುಂತುರು ಮಳೆಹನಿಯ ತಂಪಲಿ.. ತುಟಿಗಳ ಬಿಚ್ಚಿ ಭಾವನೆಯ ಕಡಲೊಡೆವಾಸೆ .. ನಿನ್ನ ಮನ ಒಪ್ಪರೆ ಈ ಬೆಳದಿಂಗಳ ಆಸರೆಯಲಿ.. ಈ  ಹದಿಹರೆಯದ  ಮನಸಲಿ.. ಕನಸಲಿ..! ಭಾವನೆ ಬರಿದಾಗಿ ಪದಗಳ ಬರವೆ ಬಂದರು.. ನೂರು ಮಂದಿ ನೂರೆಂಟು ನುಡಿದರು.. ನಿನ್ನನ್ನರಿತ ಈ ಮನಕೆ ನೀ ಚಿನ್ನದ ಅದಿರು.. ಪ್ರಣಯ ಪದಗಳ ವಜ್ರದ ಬಂದರು.. ನೀ..ನನ್ನೀ  ಹದಿಹರೆಯದ  ಸಮುದ್ರದ ಜೀವಂತ ಕಂದರು.. ಕಂದರು..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙?...

ಬೆಳಗಲಿ ಭಾಳು

Image
  ಬೆಳಗಲಿ ಭಾಳು..! *************************************** ©All Rights reserved by  Myunsungpoetry.blogspot.com Ref no :- MUP/24102022/24 *************************************** ಬೆ ಳಗಲಿ ಬಾಳು ಉಜ್ವಲಿಸುತ ಬಾನೆತ್ತರಕ್ಕೆ ಮುಂದೆ-ಮುಂದೆ ಸಾಗುತ್ತ-ಸಾಗುತ್ತ  ನೋಡುತ ನುಗ್ಗುತ್ತ ಬದುಕಿನ   ಏಳುಬೀಳನ್ನು  ಸಾಧನೆಯ ಸುವರ್ಣದಾದಿಯಲಿ ಬೆಳಗಲಿ ಬಾಳು..|2| ಬೆಳಗಲಿ ಬಾಳು ಸಾಟಿಯಿಲ್ಲದ ಸರದಾರನಂತೆ ಕೆಚ್ಚೆದೆಯದಿ ವೀರಶೌರ್ಯದಿ ಕತ್ತಲಲು ಬೆಳಕಿನ ಜಾಡು ಹುಡುಕುತ ಕಷ್ಟದ ಸಮಯದಲು ಮುಗುಳುನಗುತ ಬೆಳಗಲಿ ಬಾಳು..|2| ಬೆಳಗಲಿ ಬಾಳು ಮುಗಿಲೊಡೆದು ಮಳೆ ಭೋರ್ಗರೆದರೂ ಬೆಳಗುವ ಸೂರ್ಯ ಜ್ವಾಲೆಯಾಗಿ ಹುರಿದರೂ ಆಸರೆ ಹೊತ್ತ ಭೂ ಬಾಯ್ತೆರೆದರೂ  ನಂಬಿಕೆಯೆಂಬ ಕೊಂಬೆಯಲಿ ಬದುಕುತ್ತ  ಬೆಳಗಲಿ ಬಾಳು..|2| ಬೆಳಗಲಿ ಬಾಳು ತನ್ನವರು ಒಡ ಹುಟ್ಟಿದವರು ದೂರಸರಿದರು, ಧನವಿಲ್ಲದೆ ಜೇಬು ಬರಿದಾದರು, ಸೂರಿರದೆ ಬೀದಿ-ಬದಿ ತಿರುಗಿದರು ನಾಳೆಯೆಂಬ ಭರವಸೆಯ ಧೈರ್ಯದಿ  ಕನಸಿನ ಮೂಟೆ ಹೊತ್ತು  ಬೆಳಗಲಿ ಬಾಳು ಬೆಳಗಲಿ..|2| ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.co...

ಭವ್ಯವಾಗಲಿ ಭಯವು ನೀಗಲಿ.!

Image
ಭವ್ಯವಾಗಲಿ ಭಯವು ನೀಗಲಿ.! **************************************** ©All Rights reserved by  Myunsungpoetry.blogspot.com Ref no :- MUP/25092022/23 **************************************** ಭ ವ್ಯವಾಗಲಿ ಭಯವು ನೀಗಲಿ ನೂರು ತಿರುವು ಬಂದರು, ಬಾಳಿಗೊಂದು ಭಾವವಿರಲಿ ನಾಳೆಯೆOಬ ಪಥದಲಿ.! ಕೆಚ್ಚೆದೆಯದಿ ಕೇಸರಿಯನು ತನು-ಮನದಲಿ ಅಡಗಲಿ, ಶಾಂತಿ ಶುದ್ಧತೆ ಹೊಳಪು ಮೆರೆಯಲಿ  ಅಗ್ರಗಣ್ಯರ ಹೆಸರಲಿ.! ಹಸಿರುಹೊದ್ದು ದೇಶ ಉಳಿಸಲು ದೇಶಕಾಗಿ ನೆತ್ತರರಿಸಿ ಜೀವತೆತ್ತ ವೀರಯೋಧರ ಭಾಳು ಹಸಿರಾಗಲಿ ಹೆಸರು ಎಂದೆಂದೂ ಚಿರವಾಗಲಿ.! ಸೂರ್ಯಚಂದ್ರರು ಇರುವವರೆಗೂ ದೇಶ ಪ್ರೇಮದ ದೀಪಬೆಳಗಲಿ, ಈ ಭೂಮಿ ತಾಯಿಯ ಮಡಿಲಲಿ ಜ್ಞಾನವೆಂಬ ಬೆಳಕು ಚೆಲ್ಲಲಿ ರಾಷ್ಟ್ರ ಬಂಧ ಸ್ಥಿರವಾಗಲಿ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮೋಹವೋ..ದಾಹವೋ.. ನಾ ಕಾಣೆ.?

Image
ಮೋಹವೋ.. ದಾಹವೋ.. ನಾ ಕಾಣೆ.? ©All Rights reserved by  Myunsungpoetry.blogspot.com Ref no :- MUP/25092022/22 **************************************** ನಿಶ್ಶಬ್ದದ ರಾತ್ರಿಯಲಿ......          ಶಯನದ ವೇಳೆಯಲಿ.... ನಿನ್ನ ನೆನಪಾಯಿತು ಹೃದಯದಲಿ ಬಾನ ಚಂದಿರ ನಾಚಿ ನೀರಾದ ಕ್ಷಣದಲಿ ತಾಣವೆ ಅಂಬರವೆಂದು ಮರೆತನು        ಧರೆಗೆ ಜಾರುವ ಆತುರದಲಿ...... ಇದು ಮಾಯೆಯೋ.....          ನಿನ್ನಂದದ ಛಾಯೆಯೋ..... ನಾ ಅರಿಯೇ ನನ್ನೆದೆಯ ಸಹಚರಿಯೇ        ನಾ ಕಂಡು ಬೆರಗಾದೆನಲ್ಲೇ    ಕನಸಿನ ಸಾಮ್ರಾಜ್ಯದ ಒಡತಿಯೇ..... ಅಮವಾಸ್ಯೆಯ ಮಬ್ಬಿನಲಿ......         ಸ್ವಪ್ನದ ಸಮಯದಲಿ.... ನಿನ್ನ ಸೊಬಗಿನ ಚಿತ್ರಣ ನಯನದಲಿ ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ ತನ್ನ ಕಾಯಕವೇ ಅರಿಯದಾದನು           ನಿನ್ನ ಸೇರುವ ಕಾತುರದಲಿ...... ಇದು ಮೋಹವೋ.....          ಒಲವಿನ ದಾಹವೋ..... ನಾ ಕಾಣೆನೇ ಜೀವದ ಗೆಳತಿಯೇ ತಾಳದೆ ಸಂಮೋಹಿತನಾದೆನಲ್ಲೇ  ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ..... Anu ....✍🏻❣️ Bengaluru. **************************************** We heartly welcome...

ಹುಲು ಮಾನವ

Image
ಹುಲು ಮಾನವ **************************************** ©All Rights reserved by  Myunsungpoetry.blogspot.com Ref no :- MUP/25092022/21 **************************************** ಅ ದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿಗೇಳುವುದು ಎಲೆಮಾನವ!!! ಅದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿ...

ನನ್ನಲ್ಲೇ ಉಳಿದ ಮಾತು..!

Image
ನನ್ನಲ್ಲೇ ಉಳಿದ ಮಾತು..! ©All Rights reserved by  Myunsungpoetry.blogspot.com Ref no :- MUP/21082022/20 **************************************** ನೆ ನೆಯುವುದೆಲ್ಲ ನಡೆಯುವುದಿಲ್ಲ... ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು? ಕಾಣದಾಚೆಗೆ ಕನಸು ಕಟ್ಟಿ... ಆಶ್ವಾಸನೆಯ ಬೀಜ ಬಿತ್ತಿ... ಕಲ್ಪನೆಗೆ ಜೀವ ತೆತ್ತಿ... ಹೊಳೆಯುವುದೆಂತು ನನ್ನ   ಶ್ರಮದ ಕಾಂತಿ? ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ... ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ... ಭ್ರಮೆಯ ಬದುಕು ವಾಸ್ತವವಲ್ಲ... ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!! ✍️ಮೇಘ ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮರಳಿಬಾರದ..... ಮನ ಅಳಿಸದ ಸುಂದರ ಸವಿ ನೆನಪುಗಳು.....

Image
ಮರಳಿಬಾರದ.....     ಮನ ಅಳಿಸದ   ಸುಂದರ ಸವಿ ನೆನಪುಗಳು.... **************************************** ©All Rights reserved by  Myunsungpoetry.blogspot.com Ref no :- MUP/09082022/19 **************************************** ಹು ಣ್ಣಿಮೆಯ ರಾತ್ರಿಯಲಿ  ಪೂರ್ಣ ಚಂದಿರನ ಸುಂದರ ಬೆಳದಿಂಗಳಲಿ ತಂಗಾಳಿ ತಣ್ಣನೆ ಬೀಸಿ ಮೈ ಸೋಕಿದ ಹಾಗೆ  ಮನಃಶಾಂತಿ ತುಂಬಿದ ಹೃದಯ  ವೇದನೆ ಅರಿಯದ ಚಿತ್ತ  ತೊದಲ ನುಡಿಗಳು  ಮೊಗದಲಿ ನಗುವನ್ನೇ ಆಭರಣವಾಗಿ ತೊಟ್ಟಿದ್ದ  ಬಾಲ್ಯದ ಆ ಮಧುರ ಕ್ಷಣಗಳು ನೆನಪಾಗಿ ಮೈ ರೋಮಾಂಚನವಾಗಿ ಮನ ಹಾಯಾಗಿರಲು..... ಅಮ್ಮನು ಆಡಿದ ಜೋಗುಳ  ಅಪ್ಪನ ಹೆಗಲೇರಿದ ಆ ದಿನಗಳ ಬಾನಿನಲ್ಲಿ ಚಂದಮಾಮನ ಕಂಡು ಸವಿ ಮಾತಿಗಾಗಿ ಕಾತುರ  ಶಶಿಯು ಧರೆಗೆ ಇಳಿಯಲಾರ ಎಂಬ ಬೇಸರ  ತಾರೆಗಳ ಎಣಿಸುವ ಸಡಗರ ಎಣಿಸಲಾಗದೆ ಓಡಿ ಸರಸರ  ಅಜ್ಜಿಯ ಮಡಿಲೇರಿ ಕೇಳಿದ ಕಥೆಗಳ ಸಾರ  ಗಾನದಂತೆ ಇಂದಿಗೂ ಸುಮಧುರ  ಪುನಃ ಪಿಸು ಮಾತಿನಂತೆ ಕಿವಿಯಲಿ ಇಂಪಾಗಿರಲು..... ಸವಿ ಸವಿ ಸಾವಿರ ಸ್ಮೃತಿ ಕಾಮನಬಿಲ್ಲಂತೆ ಮೂಡಿರಲು ಮನ ನಲಿದಾಡಿ ಸುರಲೋಕಕ್ಕೆ ಜಾರಿದ ಭಾಸ  ನೆನಪಲ್ಲೇ ನೆನಪನ್ನು ಮುದ್ದಿಸಿ ನೆನಪೆಂದು ನೆನೆದು ಮೊಗದಲಿ ಮುಗುಳ್ನಗೆ ಆವರಿಸಿರಲು  ಮರಳಿಬಾರದ,,, ಮನ ಅಳಿಸದ,, ಸುಂದರ ಸವಿ ನೆನಪುಗಳು  ಮಂದಹಾಸ ಹ...

ಮಾಯದ ಕುದುರೆಯು ಮೈಯೆರಿ.!

Image
ಮಾಯದ ಕುದುರೆಯು ಮೈಯೆರಿ.! ©All Rights reserved by Myunsungpoetry.blogspot.com Ref no :- MUP/09082022/18 **************************************** ಮಾ ಯದ ಕುದುರೆಯು ಮೈಯೆರಿ ಭಾವನೆಯ ಒಡಲ ಪಾತಾಳಕ್ಕಿಳಿಸಿದೆ ಮೌನವ ಕದಡಿ ಕತಕಳಿ ಆಡಿಸುತ್ತಿದೆ ಇದನರಿಯದೆ ಯೌವನ ಹುಚ್ಚುನಂತೆ ಅತ್ತಿOದಿತ್ತ ಜಗತ್ತನು ಗಸ್ತು ಹೊಡಿಯುತ್ತಿದೆ.! ಮಾಯದ ಕುದುರೆಯು ಮೈಯೆರಿ ಮಡಿಯೊತ್ತ ಮನಸನು ಮಲಿನ ಮಾಡಿ ಚಲವಿತ್ತ ಪೌರುಷವ ಹುಸಿಮಾಡಿ ಭರವಸೆಯ ಕಡಲನು ಬರಿದುಮಾಡಿ ಆಹ್ವಾನಿಸಿದೆ ಒಂಟಿತನದ ಪೊಳ್ಳು ಜಗತ್ತಿದೆ.! ಮಾಯದ ಕುದುರೆಯು ಮೈಯೆರಿ ಸಂಬಂಧದ ಬಂಧಗಳ ಕದಡಿ ಹಸಿರೊದ್ದ ಆಲೋಚನೆಯ ಬಂಜೆ ಮಾಡಿ ಗದ್ದಲದ ಆಧುನಿಕ ಜಗತ್ತಿನ ಜೊತೆಗೂಡಿ  ಕಾಡುತ್ತಿದೆ ಯುವ ಜನತೆಯ ಮಂಕು ಮಾಡಿ.! ಮಾಯದ ಕುದುರೆಯು ಮೈಯೆರಿ ಕಾಮನ ಲೋಕಕೆ ಕರೆತಂದಿದೆ ಮೋಹದ ಮರಳನು ಹೆರಚುತ್ತಿದೆ ದ್ವೇಷ-ಅಸೂಯೆಯನೆ ಪಟ್ಟಿಸುತ್ತಿದೆ ಅರಿವಿನ ಹಗಲಲು ಕುರುಡರಂತಾಗಿಸಿ.. ಮಾಯದ ಕುದುರೆಯು ಮೈಯೆರಿ.. ಬೆನ್ನತ್ತ ಬೇತಾಳದಂತೆ ಹೆಗಲೇರಿ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜...

ನೆಚ್ಚಿನ ಗುರು

Image
  ನೆಚ್ಚಿನ ಗುರು **************************************** ಅ ರಿವೇ ಗುರುವೆನ್ನುವರು ಗುರುವಿಲ್ಲದೆ ಅರಿವು ಸಾಧ್ಯವೇ? ನನ್ನ ನೆಚ್ಚಿನ ಗುರುವು ದೈವವೇ ಸರಿ  ಅದಕ್ಕೆ ಇರಬೇಕು ನೋಡಿದೊಡನೆ ವಿನಮ್ರಳಾಗಿ ನಿಲ್ಲುವೆ! ಅಂಧಕಾರದಿಂದ ಜ್ಞಾನದ ಬೆಳಕಿಗೆ ಕರೆದೊಯ್ಯುವ ಗುರುವೆ ನನ್ನ ಅರಿವು! ಚಿರವಾಗಲಿ ನನ್ನ ಗುರುವಿನ ಕಾಯಕ  ಅಪೇಕ್ಷೆಯಿಲ್ಲದ ನಿಸ್ವಾರ್ಥ ಪಾಠವು! ಕಾಣಸಿಗುವುದೇ ಹುಲು ಮಾನವನಿಗೆ ತ್ರಿಮೂರ್ತಿಗಳ ದರ್ಶನ! ಹೀಗಾಗಿಯೇ ಹೇಳಿರಬೇಕು ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಹ!  ಗುರುವಿಗೆ ಗುಲಾಮನಾಗುವವರೆಗೂ ಸಿಗಲಾರದಯ್ಯ ಮುಕುತಿ! ಎಂದಿಗೂ ಶಾಶ್ವತ ನಿನ್ನ ಮೇಲಿನ ಭಕುತಿ ಜ್ಞಾನದ ಕಣಜವೇ ನೀನು ನನ್ನಯ ಪಾಲಿಗೆ ನೀನೆ ಕಾಮಧೇನು!! ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇