ನನ್ನಪ್ಪ
©All Rights reserved by Myunsungpoetry.blogspot.com R ef no :- MUP/18062023/40 ************************************* ನಿನಗಾಗಿ ಏನೂ ಅಪೇಕ್ಷಿಸಿದೆ ದುಡಿದು ದಣಿದಿರುವೆ ನಮಗಾಗಿ, (2) ನಮ್ಮ ಖುಷಿಯಲ್ಲಿ ನೀ ತೃಪ್ತನಾದೆ ಮನಸ್ಸಲ್ಲೇ ನಮಿಸುವೆ ಶಿರಬಾಗಿ.. (2) ಹೆಣೆದಿರುವೆ ಸಾಲು ಕನಸುಗಳ ನಾಳೆಯ ನನ್ನ ಬದುಕಿಗಾಗಿ, (2) ಪೂರೈಸಲು ಜನುಮ ಸಾರ್ಥಕ ಹುರಿದುಂಬಿಸು ನೀ ಬಲವಾಗಿ. (2) ನಾ ನೊಂದರೆ ನೀ ಮರುಗುವೆ ಅದೃಷ್ಟಳು ನಾ ನಿಜವಾಗಿ, (2) ಗುರುವಾಗಿ ತಿದ್ದಿಸಿ ತಪ್ಪನ್ನು ಮನ್ನಿಸಿ ಪ್ರೀತಿಯಿಂದ ಮುದ್ದಿಸಿ ನೆರಳಾಗಿರುವೆ ನೀ ಮರವಾಗಿ. (2) ಸವೆದಿರವೆ ಕಷ್ಟಗಳೊಡನೆ ಹೋಗಲಿ ಕಹಿ ಕ್ಷಣಗಳು ಮರೆಯಾಗಿ, (2) ನಿನಗೆ ನೀನೆ ಸರಿಸಾಟಿ ಹೇಳುವೆ ಹೆಮ್ಮೆಯಿಂದ ಬೀಗಿ, ಕೂಗಿ. (2) *************************************** ✍️ಮೇಘ ಬೆಂಗಳೂರು. #Myunsungpoetry.blogspot.com# W e heartly welcome your suggestions. Please contact through, Email- keerthankeeru2001@gmail.com Ph No. - 9743104743