ನೀ ಬಾಡದ ಮಲ್ಲಿಗೆ..!
©All Rights reserved by Myunsungpoetry.blogspot.com R ef no :- MUP/23092023/42 **************************************** ಸಾಗುತ್ತಿರುವೆ ಸಾಲು ಕಷ್ಟದಡಿ ಸೋಲಿನ ಮಳೆಗೆ ಹೆದರದೆ ಮುನ್ನಡಿ (2) ಸಾಲದು ನಿನ್ನಂದ ವರ್ಣಿಸಲು ಕಿರುಗನ್ನಡಿ ಒಪ್ಪಿ ಹೆಗಲಾಗುವೆ ನಿನಗೆ ನಾ ಕಣ್ಮಣಿ ಸದಾ ನಗುತ್ತಿರು ನೀ ಬಾಡದ ಮಲ್ಲಿಗೆ.! (2) ನಮ್ಮಿ ಭಾವನೆ ಬತ್ತದ ಕಡಲ ಹುಂಡಿ ಎಲ್ಲಿದ್ದರು ನಾವೇ ಜಗ ಮೆಚ್ಚಿನ ಜೋಡಿ (2) ಕಳೆದೋದೆ ಹುಕ್ಕಿ ಅರಿವ ಜಲಪಾತದಡಿ ಅರಿತು ನಿನ್ನ ಜಾಲ್ಮೆಯ ನಡೆ ನುಡಿ ಸದಾ ನನ್ನಲ್ಲಿರು ನೀ ಬಾಡದ ಮಲ್ಲಿಗೆ..! (2) ಕನಸಲು ಕರೆದೋಗುವೆ ನನ್ನ ಕಾಡಿ ಬಿಡಿಸಲಾಗದ ಒಗಟು ನಿನ್ನೀ ಮೋಡಿ (2) ಮತ್ತೆ ಕೋರುವೆ, ನೀ ಜನರ ಮಾತು ದೂಡಿ ಒಪ್ಪುವೆಯ ಬಾಳಲು ನನ್ನೊಡನೆ ಕೂಡಿ ಹೇಳು ನೀ ಬಾಡದ ಮಲ್ಲಿಗೆ..! (2) ****************************************