ಬೆಳಗಲಿ ಭಾಳು

 ಬೆಳಗಲಿ ಭಾಳು..!

***************************************

©All Rights reserved by Myunsungpoetry.blogspot.com
Ref no :- MUP/24102022/24
***************************************
ಬೆಳಗಲಿ ಬಾಳು
ಉಜ್ವಲಿಸುತ ಬಾನೆತ್ತರಕ್ಕೆ
ಮುಂದೆ-ಮುಂದೆ ಸಾಗುತ್ತ-ಸಾಗುತ್ತ 
ನೋಡುತ ನುಗ್ಗುತ್ತ ಬದುಕಿನ   ಏಳುಬೀಳನ್ನು 
ಸಾಧನೆಯ ಸುವರ್ಣದಾದಿಯಲಿ
ಬೆಳಗಲಿ ಬಾಳು..|2|

ಬೆಳಗಲಿ ಬಾಳು
ಸಾಟಿಯಿಲ್ಲದ ಸರದಾರನಂತೆ
ಕೆಚ್ಚೆದೆಯದಿ ವೀರಶೌರ್ಯದಿ
ಕತ್ತಲಲು ಬೆಳಕಿನ ಜಾಡು ಹುಡುಕುತ
ಕಷ್ಟದ ಸಮಯದಲು ಮುಗುಳುನಗುತ
ಬೆಳಗಲಿ ಬಾಳು..|2|

ಬೆಳಗಲಿ ಬಾಳು
ಮುಗಿಲೊಡೆದು ಮಳೆ ಭೋರ್ಗರೆದರೂ
ಬೆಳಗುವ ಸೂರ್ಯ ಜ್ವಾಲೆಯಾಗಿ ಹುರಿದರೂ
ಆಸರೆ ಹೊತ್ತ ಭೂ ಬಾಯ್ತೆರೆದರೂ 
ನಂಬಿಕೆಯೆಂಬ ಕೊಂಬೆಯಲಿ ಬದುಕುತ್ತ 
ಬೆಳಗಲಿ ಬಾಳು..|2|

ಬೆಳಗಲಿ ಬಾಳು
ತನ್ನವರು ಒಡ ಹುಟ್ಟಿದವರು ದೂರಸರಿದರು,
ಧನವಿಲ್ಲದೆ ಜೇಬು ಬರಿದಾದರು,
ಸೂರಿರದೆ ಬೀದಿ-ಬದಿ ತಿರುಗಿದರು
ನಾಳೆಯೆಂಬ ಭರವಸೆಯ ಧೈರ್ಯದಿ 
ಕನಸಿನ ಮೂಟೆ ಹೊತ್ತು 
ಬೆಳಗಲಿ ಬಾಳು ಬೆಳಗಲಿ..|2|

✍️ಕೀ.ಕೆ
ಬೆಂಗಳೂರು 

***************************************

#Myunsungpoetry.blogspot.com#
Wheartly welcome your suggestions.
Please contact through,
Ph No.9743104743

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

Nadeesh said…
ಬಹಳ ಸೊಗಸಾಗಿದೆ KKಅಣ್ಣ..
Ramesh said…
KK very nice lines...
Pooja said…
ಮುಂದುವರಿಯಲಿ ನಿಮ್ಮ ಕವನ ಯಾನ

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!