Posts

Showing posts with the label Kannada Poetry

ನೀ ಮುಡಿದ ಮಲ್ಲಿಗೆ..!

Image
  ನೀ ಮುಡಿದ ಮಲ್ಲಿಗೆ..! ©All Rights reserved by  Myunsungpoetry.blogspot.com Ref no :- MUP/24122022/28 *************************************** ಬೋ ರ್ಗರೆವ ಆ ತೀರದ ಕಡೆಗೆ, ಕಗ್ಗತ್ತಲ ಮಿನುಗುವ ತಾರೆಗಳ ಬಳಿಗೆ, ಏಕಾಂತದಿ ಚಂದಿರನಿರುವ ಮುಗಿಲಿಗೆ, ನಿನ್ನ ಕರೆದೋಗುವಾಸೆ ಈ ಮನಸಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ಒಂಟಿತನದಿ ಮುಳಿಗಿದ್ದೀ ಬಾಳಿಗೆ, ಜೊತೆಯಾಗುವೆಯೆಂದು ಈ ತೊಳಿಗೆ, ಮನಸ್ಸು-ಕನಸಲಿ ನೀಡಿದೆ ನಿನಗೆ ಸಲುಗೆ, ಬರೆವ ಪದಗಳು ಕರೆದೋಯುತ್ತಿದೆ ನಿನ್ನ ಬಳಿಗೆ, ನೋಡಿ ನೀ ಮುಡಿದ ಮಲ್ಲಿಗೆ..! ನಿನ್ನನ್ನೇ ಜಪಿಸುತ್ತಿರುವೆ ಪ್ರತಿಗಳಿಗೆ, ನೀ ನುಡಿದ ಪದಗಳೆ ಮೆಟ್ಟಿಲುಗಳು ಈ  ಸಾಲಿಗೆ, ನಿನ್ನ ಗೆಜ್ಜೆ ನಾದವೆ ತಾಳ ಈ ಕವಿತೆಗೆ, ಒಮ್ಮೆ ನೀಡುವೆಯ ತಬ್ಬಿಮುದ್ದಾಡಲು ಸಲುಗೆ, ಬಾಡುವ ಮೊದಲು ನೀ ಮುಡಿದ ಮಲ್ಲಿಗೆ..? ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಓ ಮನದ ರಾಜನೇ..!

Image
ಓ ಮನದ ರಾಜನೇ..! ©All Rights reserved by  Myunsungpoetry.blogspot.com Ref no :- MUP/08122022/27 **************************************** ಮೆ ಲ್ಲನೆ ಸೂರ್ಯ ಮರೆಯಾಗಿರಲು ಹರುಷದಲ್ಲಿ ಚಂದ್ರ ತೇಲಿ ಬರುತಿರಲು ನಿನ್ನ ನೆನಪು ಮನದಲ್ಲಿ ಮಂದಹಾಸ ತಂದಿರಲು  ನಿನ್ನನ್ನು ಹೃದಯದ ಗೋಪುರದಲ್ಲಿ ಪೂಜಿಸಿ ಆರಾಧಿಸುತ್ತಿರುವೆ  ನಲ್ಮೆಯ ನಲ್ಲನೆ  ಕಾಡುತಿರುವೆ ನೀ ಏಕೆ ಕನಸಲೇ ಬಂದು  ಈ ಕಣ್ಣುಗಳಿಗೆ ದರುಶನ ನೀಡುವೆಯ ಪ್ರೀತಿಯ ದಾರಿ ತೋರುವೆಯಾ ಈ ಒಂಟಿತನದ ಪಯಣಕ್ಕೆ  ಸಾಗುವೆ ಜೊತೆ ಜೊತೆಯಲ್ಲೇ ಓ ಮನದ ರಾಜನೇ ನಿಷ್ಕಲ್ಮಶ ಮನಸ್ಸಿನ ಒಡೆಯನೇ  ಕನಸಲೇ ಬಂದು ಕನಸಲ್ಲೇ ಆಗುವೆ ಮಾಯ ಹೇ ಪ್ರಿಯ ಸಖನೇ  ಜೀವ ತುಂಬುವೆಯ  ಈ ಕಲ್ಪನೆಯ ಪ್ರೀತಿಗೆ  ನಗುತಲೆ ಕೇಳುವೆ ನಾ ನೀ ಯಾರೆಂದು ತಿಳಿಸುವೆಯಾ ? ನನ್ನೀ ಮುಗ್ದ ಮನಸ್ಸಿಗೆ ಒಮ್ಮೆ ತಿಳಿಸಿದರೆ  ನೀ ಬರುವ ದಾರಿಯಲ್ಲಿ  ಪ್ರೀತಿಯ ಹೂಗಳ ಚೆಲ್ಲಿ  ಸ್ವಾಗತಿಸುವೆ ನನ್ನೀ ಹೃದಯದ ಅರಮನೆಗೆ....🥰 Anu ....✍🏻❣️ Bengaluru. **************************************** I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 #Myunsungpoetry.blogspot.com# 𝙸?...

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

Image
ಮಾಯದಲ್ಲಿ ಮಾಸುಹೋಗಿದೆ ಮನಸ್ಸು ©All Rights reserved by  Myunsungpoetry.blogspot.com Ref no :- MUP/30112022/26 *************************************** ಬಾ ಣದಂತ ಸಮಯದ ನಡು ಸಿಲುಕಿ.. ಬಿರುಗಾಳಿಯಂತ ಕೆಡುಕು ಮಾತಿಗೆ ನಲುಕಿ.. ಜಗತ್ತಿನ್ನೆಲ್ಲ ಆಗೂ -ಹೋಗುಗಳ ಕಡೆ ಇಣುಕಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಕಟಿಕರ ಕುಟೀರದಲ್ಲಿ ಸೇರಿ.. ಕಾಮಕ್ರೋಧದ ಬಲೆಯಲ್ಲಿ ತೂರಿ.. ಮೂಢನಂಬಿಕೆಯ ಜಾಲದಲ್ಲಿ ಜಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಲೋಕದ ಸರಿ-ತಪ್ಪುಗಳ ಹೆಗಲ ಮೇಲೇರಿ.. ಪ್ರೇಮಲೋಕವ ದಿನವು ನೆನೆದು ನೂರು ಬಾರಿ.. ಮರೆತು ತನ್ನ ಜೀವನದ ಸಾಧನೆಯ ದಾರಿ.. ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!.. ಆದರೂ ಎಲ್ಲೋ.......... ಭರವಸೆಯ ಕಿರಣ ಮನಸಲಿ ತೂರಿ.. ಗೆಲ್ಲುವ ಹಾದಿ ಹಿಡಿದಿದೆ ಗುರಿಯ ಕೋರಿ.. ಚಾಟಿಬೀಸುತ ಪಂಚೆದ್ರೀಯಗಳ ರಥವನ್ನೇರಿ.. ಕನಸಿನ ಕೋಟೆ ತಲುಪಲೊಂದೆ ಜೀವನವೆಂದು ತೋರಿ.!. ಮಾಯದಲ್ಲಿ ಮಾಸು ಹೋಗಿದ್ದ ಮನಸ್ಸು ಇಂದು ..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 ...

ಹದಿಹರೆಯದ ಮನದಲಿ... ಕನಸಲಿ...!

Image
ಹದಿಹರೆಯದ  ಮನದಲಿ... ಕನಸಲಿ...! ©All Rights reserved by  Myunsungpoetry.blogspot.com Ref no :- MUP/23112022/25 *************************************** ಹದಿಹರೆಯದ  ಮನದಲಿ ನಿನ್ನದೆ ಧ್ಯಾನ..   ಕಾದು ಕಾದು ಕನವರಿಸುತ ಮೌನಿಯಾಗಿದೆ ಮನ.. ಜೊತೆಹಾಕಿದ ಹೆಜ್ಜೆಯ ಮೆಲುಕುಹಾಕುತ ಪ್ರತಿ ಕ್ಷಣ.. ಯಾರಿರಾದ ಹೊತ್ತಲಿ ನಿನ್ನ ನೆನಪಿಗೆ ಬಣ್ಣ ನೀಡುತಿದೆ ನನ್ನೀ ಕವಿಗುಣ.. ಈ ಹದಿಹರೆಯದ ಮನಸಲಿ.. ಕನಸಲಿ..! ನನ್ನೀ ತೋಳುಗಳ ಹೆಕ್ಕಿ ನಿನ್ನನಬ್ಬಿ ಮುದ್ದಾಡುವಸೆ.. ಈ ತುಂತುರು ಮಳೆಹನಿಯ ತಂಪಲಿ.. ತುಟಿಗಳ ಬಿಚ್ಚಿ ಭಾವನೆಯ ಕಡಲೊಡೆವಾಸೆ .. ನಿನ್ನ ಮನ ಒಪ್ಪರೆ ಈ ಬೆಳದಿಂಗಳ ಆಸರೆಯಲಿ.. ಈ  ಹದಿಹರೆಯದ  ಮನಸಲಿ.. ಕನಸಲಿ..! ಭಾವನೆ ಬರಿದಾಗಿ ಪದಗಳ ಬರವೆ ಬಂದರು.. ನೂರು ಮಂದಿ ನೂರೆಂಟು ನುಡಿದರು.. ನಿನ್ನನ್ನರಿತ ಈ ಮನಕೆ ನೀ ಚಿನ್ನದ ಅದಿರು.. ಪ್ರಣಯ ಪದಗಳ ವಜ್ರದ ಬಂದರು.. ನೀ..ನನ್ನೀ  ಹದಿಹರೆಯದ  ಸಮುದ್ರದ ಜೀವಂತ ಕಂದರು.. ಕಂದರು..! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙?...

ಬೆಳಗಲಿ ಭಾಳು

Image
  ಬೆಳಗಲಿ ಭಾಳು..! *************************************** ©All Rights reserved by  Myunsungpoetry.blogspot.com Ref no :- MUP/24102022/24 *************************************** ಬೆ ಳಗಲಿ ಬಾಳು ಉಜ್ವಲಿಸುತ ಬಾನೆತ್ತರಕ್ಕೆ ಮುಂದೆ-ಮುಂದೆ ಸಾಗುತ್ತ-ಸಾಗುತ್ತ  ನೋಡುತ ನುಗ್ಗುತ್ತ ಬದುಕಿನ   ಏಳುಬೀಳನ್ನು  ಸಾಧನೆಯ ಸುವರ್ಣದಾದಿಯಲಿ ಬೆಳಗಲಿ ಬಾಳು..|2| ಬೆಳಗಲಿ ಬಾಳು ಸಾಟಿಯಿಲ್ಲದ ಸರದಾರನಂತೆ ಕೆಚ್ಚೆದೆಯದಿ ವೀರಶೌರ್ಯದಿ ಕತ್ತಲಲು ಬೆಳಕಿನ ಜಾಡು ಹುಡುಕುತ ಕಷ್ಟದ ಸಮಯದಲು ಮುಗುಳುನಗುತ ಬೆಳಗಲಿ ಬಾಳು..|2| ಬೆಳಗಲಿ ಬಾಳು ಮುಗಿಲೊಡೆದು ಮಳೆ ಭೋರ್ಗರೆದರೂ ಬೆಳಗುವ ಸೂರ್ಯ ಜ್ವಾಲೆಯಾಗಿ ಹುರಿದರೂ ಆಸರೆ ಹೊತ್ತ ಭೂ ಬಾಯ್ತೆರೆದರೂ  ನಂಬಿಕೆಯೆಂಬ ಕೊಂಬೆಯಲಿ ಬದುಕುತ್ತ  ಬೆಳಗಲಿ ಬಾಳು..|2| ಬೆಳಗಲಿ ಬಾಳು ತನ್ನವರು ಒಡ ಹುಟ್ಟಿದವರು ದೂರಸರಿದರು, ಧನವಿಲ್ಲದೆ ಜೇಬು ಬರಿದಾದರು, ಸೂರಿರದೆ ಬೀದಿ-ಬದಿ ತಿರುಗಿದರು ನಾಳೆಯೆಂಬ ಭರವಸೆಯ ಧೈರ್ಯದಿ  ಕನಸಿನ ಮೂಟೆ ಹೊತ್ತು  ಬೆಳಗಲಿ ಬಾಳು ಬೆಳಗಲಿ..|2| ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.co...

ಭವ್ಯವಾಗಲಿ ಭಯವು ನೀಗಲಿ.!

Image
ಭವ್ಯವಾಗಲಿ ಭಯವು ನೀಗಲಿ.! **************************************** ©All Rights reserved by  Myunsungpoetry.blogspot.com Ref no :- MUP/25092022/23 **************************************** ಭ ವ್ಯವಾಗಲಿ ಭಯವು ನೀಗಲಿ ನೂರು ತಿರುವು ಬಂದರು, ಬಾಳಿಗೊಂದು ಭಾವವಿರಲಿ ನಾಳೆಯೆOಬ ಪಥದಲಿ.! ಕೆಚ್ಚೆದೆಯದಿ ಕೇಸರಿಯನು ತನು-ಮನದಲಿ ಅಡಗಲಿ, ಶಾಂತಿ ಶುದ್ಧತೆ ಹೊಳಪು ಮೆರೆಯಲಿ  ಅಗ್ರಗಣ್ಯರ ಹೆಸರಲಿ.! ಹಸಿರುಹೊದ್ದು ದೇಶ ಉಳಿಸಲು ದೇಶಕಾಗಿ ನೆತ್ತರರಿಸಿ ಜೀವತೆತ್ತ ವೀರಯೋಧರ ಭಾಳು ಹಸಿರಾಗಲಿ ಹೆಸರು ಎಂದೆಂದೂ ಚಿರವಾಗಲಿ.! ಸೂರ್ಯಚಂದ್ರರು ಇರುವವರೆಗೂ ದೇಶ ಪ್ರೇಮದ ದೀಪಬೆಳಗಲಿ, ಈ ಭೂಮಿ ತಾಯಿಯ ಮಡಿಲಲಿ ಜ್ಞಾನವೆಂಬ ಬೆಳಕು ಚೆಲ್ಲಲಿ ರಾಷ್ಟ್ರ ಬಂಧ ಸ್ಥಿರವಾಗಲಿ.! ✍️ಕೀ.ಕೆ ಬೆಂಗಳೂರು  *************************************** #Myunsungpoetry.blogspot.com# W e  heartly welcome your suggestions. Please contact through, E-mail-  keerthankeeru2001@gmail.com Ph No. -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮೋಹವೋ..ದಾಹವೋ.. ನಾ ಕಾಣೆ.?

Image
ಮೋಹವೋ.. ದಾಹವೋ.. ನಾ ಕಾಣೆ.? ©All Rights reserved by  Myunsungpoetry.blogspot.com Ref no :- MUP/25092022/22 **************************************** ನಿಶ್ಶಬ್ದದ ರಾತ್ರಿಯಲಿ......          ಶಯನದ ವೇಳೆಯಲಿ.... ನಿನ್ನ ನೆನಪಾಯಿತು ಹೃದಯದಲಿ ಬಾನ ಚಂದಿರ ನಾಚಿ ನೀರಾದ ಕ್ಷಣದಲಿ ತಾಣವೆ ಅಂಬರವೆಂದು ಮರೆತನು        ಧರೆಗೆ ಜಾರುವ ಆತುರದಲಿ...... ಇದು ಮಾಯೆಯೋ.....          ನಿನ್ನಂದದ ಛಾಯೆಯೋ..... ನಾ ಅರಿಯೇ ನನ್ನೆದೆಯ ಸಹಚರಿಯೇ        ನಾ ಕಂಡು ಬೆರಗಾದೆನಲ್ಲೇ    ಕನಸಿನ ಸಾಮ್ರಾಜ್ಯದ ಒಡತಿಯೇ..... ಅಮವಾಸ್ಯೆಯ ಮಬ್ಬಿನಲಿ......         ಸ್ವಪ್ನದ ಸಮಯದಲಿ.... ನಿನ್ನ ಸೊಬಗಿನ ಚಿತ್ರಣ ನಯನದಲಿ ಮೆಲ್ಲನೆ ತೇಲಿ ಬಂದ ಶಶಿಯು ಹರುಷದಲಿ ತನ್ನ ಕಾಯಕವೇ ಅರಿಯದಾದನು           ನಿನ್ನ ಸೇರುವ ಕಾತುರದಲಿ...... ಇದು ಮೋಹವೋ.....          ಒಲವಿನ ದಾಹವೋ..... ನಾ ಕಾಣೆನೇ ಜೀವದ ಗೆಳತಿಯೇ ತಾಳದೆ ಸಂಮೋಹಿತನಾದೆನಲ್ಲೇ  ಕತ್ತಲ ಬಾಳಲಿ ಕಾಂತಿ ಚೆಲ್ಲೊ ಸಖಿಯೇ..... Anu ....✍🏻❣️ Bengaluru. **************************************** We heartly welcome...

ಹುಲು ಮಾನವ

Image
ಹುಲು ಮಾನವ **************************************** ©All Rights reserved by  Myunsungpoetry.blogspot.com Ref no :- MUP/25092022/21 **************************************** ಅ ದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿಗೇಳುವುದು ಎಲೆಮಾನವ!!! ಅದಮ್ಯ ಚೇತನ ಕುಂದುಹೋದರೆ  ನೋಡಲಾದೀತೆ... ಅಗಾಧ ಶಕ್ತಿ ಇಂಗಿ ಹೋದರೆ ತಾಳಲಾದೀತೆ... ಸಕಲ ಜೀವರಾಶಿ ನಶಿಸಿ ಹೋದರೆ ಸಹಿಸಲಾದೀತೆ... ಸಂಸ್ಕೃತಿಯ ನಾಡಲ್ಲಿ ಸಂಸ್ಕಾರ ಮರೆತರೆ ನಾಗರೀಕರಾಗಲಾದೀತೆ... ಸೌಹಾರ್ದತೆಯ ಬೀಡಲ್ಲಿ ಮಾನವೀಯತೆಯ ಮರೆತರೆ ಸಿಡಿದೇಳದೆ ಇರಲಾದೀತೆ... ಸರ್ವ ಧರ್ಮ ಸಹಿಷ್ಣು ಎಂದು ಅರಿತಿರುವವರೇ  ಜಾತಿ ಧರ್ಮಗಳ ಘರ್ಷಣೆಗೆ ಒಳಗಾದರೆ ನಗಲಾರದೆ ಇರಲಾದೀತೆ... ಬುದ್ದಿವಂತರೆ ಬುದ್ಧಿಗೇಡಿಗಳಾದರೆ ಬದುಕಲಾದೀತೆ...  ವಿದ್ಯಾವಂತರೆ ವಿದೇಶಕ್ಕೊರಟರೆ  ಮತ್ತಾರಿ...

ನನ್ನಲ್ಲೇ ಉಳಿದ ಮಾತು..!

Image
ನನ್ನಲ್ಲೇ ಉಳಿದ ಮಾತು..! ©All Rights reserved by  Myunsungpoetry.blogspot.com Ref no :- MUP/21082022/20 **************************************** ನೆ ನೆಯುವುದೆಲ್ಲ ನಡೆಯುವುದಿಲ್ಲ... ಅಪೇಕ್ಷಿಸುವುದ ಮರೆತು ವಾಸ್ತವವನ್ನರಿತು ಪ್ರೀತಿಸುವ ಪರಿಯ ಅರಿಯುವುದೆಂತು? ಕಾಣದಾಚೆಗೆ ಕನಸು ಕಟ್ಟಿ... ಆಶ್ವಾಸನೆಯ ಬೀಜ ಬಿತ್ತಿ... ಕಲ್ಪನೆಗೆ ಜೀವ ತೆತ್ತಿ... ಹೊಳೆಯುವುದೆಂತು ನನ್ನ   ಶ್ರಮದ ಕಾಂತಿ? ಜ್ಞಾನದ ಭಂಡಾರ ಪುಸ್ತಕ ಮಾತ್ರವಲ್ಲ... ಅನುಭವದಿಂದಲೆ ಕಲಿವೆವು ಜೀವನ ಪಾಠವೆಲ್ಲ... ಭ್ರಮೆಯ ಬದುಕು ವಾಸ್ತವವಲ್ಲ... ನಮಗೆ ನಾವೆ ಸಾಟಿ ಬೇರೆ ಯಾರಿಲ್ಲ!! ✍️ಮೇಘ ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ..!

Image
ನೋವಿನ ಹಾದಿಯಲ್ಲಿ.. ಮುಗ್ಧ ಹೃದಯದ ಪಯಣ.. ************************************** ** ಹೇ ಹೃದಯವೇ  ಏಕೆ ಕೊಲ್ಲುವೆ ನನ್ನನ್ನಾ  ಪ್ರತಿ ಕ್ಷಣ ಮಾಡಿ ಅವನ ನೆನಪನ್ನಾ ಬೇಕಾದರೇ ನಿಲ್ಲಿಸಿಬಿಡು ನಿನ್ನ ಬಡಿತವನ್ನ  ನೆನೆದು ನೆನೆದು ಮಾಡದಿರು ಮನಕೆ ನೋವನ್ನಾ ಹೇ ಹೃದಯವೇ  ನೋಡುವ ಹಂಬಲಕೆ ಸಾಂತ್ವಾನ ಹೇಳದಿರು ಇನ್ನೇನು ಮನದ ನೋವೆ ತಿಳಿಸಿದೆ ಎಲ್ಲವನು ಸಮಾಧಿ ಮಾಡಿ ನಿನ್ನೇಲ್ಲಾ ಭಾವನೆಗಳನು ಅರಿಯದೆ ಹೋದೆಯಾ ಮುಂದಿನ ದಿನಗಳನು... ಹೇ ಹೃದಯವೇ  ನೋವಿನಾ ಪ್ರೀತಿಯ ತಪ್ಪಿಗೆ ಕ್ಷಮಿಸೆನ್ನಾ ತಿಳಿಯದಾದೆನೆ ಪ್ರೀತಿಯ ಮೋಸವನ್ನಾ  ಇಷ್ಟಾದರೂ ನಾ ಮರೆವೆನೆ ಅವನನ್ನಾ  ಜೀವ ಇರುವರೆಗೂ ಪ್ರೀತಿಸುವೆ ನಿನ್ನಲ್ಲೇ ಬಚ್ಚಿಟ್ಟು ನನ್ನ ಇನಿಯನನ್ನಾ..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಮನ ಬರಡಾಗಿ ಬೆತ್ತಲಾಗಿದೆ.!

Image
  ಮನ ಬರಡಾಗಿ ಬೆತ್ತಲಾಗಿದೆ.! * ***************************************** ಭಾ ವನೆಗಳ ಜೊತೆಗೂಡಿ.. ಪ್ರಕೃತಿಯೊಡನೆ ನಲಿದಾಡಿ.. ಚಂದಿರನೊಡನೆ ಮುದ್ದಾಡಿ ನೂರಾರು ಪದಗಳ ಕುಡಿ-ಕುಡಿ ಚಿತ್ರಿಸಿ ಅವಳ ವರ್ಣಿಸುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ...! ಸುರಿವ ಮಳೆಯೊಡನೆ ಕುಣಿದಾಡಿ.. ಹೊಳೆವ ನಕ್ಷತ್ರಗಳ ಕಂಡು ನಾಟ್ಯವಾಡಿ.. ತೀರದ ಸಮುದ್ರದಲೆಯಲಿ ತೆಲಾಡಿ.. ಪದಗಳಲೆ ಸರಸವಾಡುತ್ತಿದ್ದ ಮನ ಬರಡಾಗಿ ಬೆತ್ತಲಾಗಿದೆ..! ನೆನಪಿನ ರೆಂಬೆ-ಕೊಂಬೆಯಲಿ ನೇತಾಡಿ.. ಕಗ್ಗತ್ತಲ್ಲಲ್ಲಿ ಬೆಳುಕಿಗಾಗಿ ಹುಡುಕಾಡಿ.. ಪ್ರೀತಿ-ಪ್ರೇಮವೆ ಹೆಚ್ಚೆ0ದು ಕಾದಾಡಿ... ಪ್ರತಿ ಕನಸಲು ಅವಳ ಸ್ಪರ್ಶವ ಹುಡುಕುತ್ತಿದ್ದ ಮನ.. ಬರಡಾಗಿ ಬೆತ್ತಲಾಗಿದೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಚೆಲುವೆ ಚೆಲುವೆ...!

Image
  ಚೆಲುವೆ ಚೆಲುವೆ...! ****************************************** ನ ಗುವ ಚಂದರನಿಗೆ ನೀ ಬಾನರಸಿ ಹೊಳೆವ ನಕ್ಷತ್ರಗಳಿಗೆ ನೀ ಉರ್ವಶಿ, ಈ ಹೃದಯ ಕದ್ದಿರುವ ನನ್ನರಸಿ ಕವಿತೆಗಳಲು ಮೂಡುತ್ತಿವೆ ನಿನ್ನನರಸಿ ಬಯಸಿ ಚೆಲುವೆ.. ಚೆಲುವೆ..! ಬೆಳದಿಂಗಳ ಚಂದಿರನಂತೆ ಕಾಡುವೆ ಕಣ್ಣಲ್ಲಿ ಕನಸಲಿ.. ನಿನ್ನ ಸಹಪಾಠಿಗೆ ಸರಿಸಾಟಿಯಾರಿಲ್ಲ ಕಗ್ಗತ್ತಲಿನ ರಾತ್ರಿಯಲಿ.. ಸುರಿವ ಮಳೆಹನಿಯ ಪ್ರತಿ ತುಂತುರಿನಲಿ... ಬೀಸುವ ಆ ಬಿರುಗಾಳಿಯ ರಬಸದಲ... ಜುಳು ಜುಳು ಅರಿವ ಆ ಜಲಪಾತದಸಿರಿಯಲಿ ನೀ ಸನಿಹ ಬರುವೆ ನೆನಪಾಗುವೆ.. ಚೆಲುವೆ..ಚೆಲುವೆ..! ನೀ ನೆನಪಾದರು/ಆಗದಿದ್ದರು ಸರಿಹೆ.. ನನ್ನ ಕವಿತೆಗೆ ನೀ ಸ್ಫೂರ್ತಿ..! ನೀ ಬಳಿ ಬಂದರು/ಬಾರದಿದ್ದರು ಸರಿಹೆ.. ಈ ಹೃದಯಕೆ ನೀ ಮರೆಯಾಗದೆ ಅಳಿಯದೆ ಉಳಿಯುವೆ.. ಚೆಲುವೆ.. ಚೆಲುವೆ..! ✍️ಕೀ.ಕೆ ಬೆಂಗಳೂರು  ***************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಸ್ನೇಹ ಸಂಕೋಲೆ.!

Image
ಸ್ನೇಹ ಸಂಕೋಲೆ.! ******************************************** ದೂ ರವಿದ್ದರು ನೀ ಮನದಲ್ಲಿ ಕೂತಿರುವೆ...  ಅಪರಿಚಿತರನ್ನು ಸನಿಹ ಬಿಡದೆ ಸ್ನೇಹ ಸ್ವಾರ್ಥಿಯಾಗಿರುವೆ... ಖುಷಿಯಲ್ಲಿ ಮಗುವಾಗಿ ಭುಜಕ್ಕೊರಗಿ, ದುಃಖಕ್ಕೆ ಅಪ್ಪುಗೆಯ ಸಾಂತ್ವಾನವಿರಿಸಿ, ಸ್ನೇಹದ ಆಕಾಂಕ್ಷೆಯಾಗಿರುವೆ... ಅಗಲಿರಲಾರೆ ನಿನ್ನ ನಾ ಗೆಳತಿ... ನಗುವ ಮುಖ ತೋರಿ ಮಗುವಾಗಿಸು ನಿನ್ನ ಮಡಿಲಲ್ಲಿ ಒಂದು ಸರತಿ... ಎಂದಿಗೂ ಸ್ನೇಹದ ಚಿಲುಮೆಯಾಗಿರು ನನ್ನೊಡತಿ... ಕೋಪ ಕೊಂಚ ಹಿಡಿದು, ಖುಷಿಯ ಹೂಗುಚ್ಚ ಮುಡಿದು, ಬಾಡದಿರು ನೀ ನನ್ನ ಮುದ್ದು ಕೋತಿ!!! ✍️ಮೇಘ  ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಕಳೆದ ದಿನಗಳ ನೆನೆದು..!!

Image
  ಕಳೆದ ದಿನಗಳ ನೆನೆದು ************************************** ** ಮ ರುಕಳಿಸದ ಸಂತೋಷದ ದಿನಗಳ ನೆನೆದು  ಮನ ದುಃಖದ ದಿನವ ಮರೆತಿದೆ ಇಂದು  ಕಂಬನಿ ಕಣ್ಣಲ್ಲೇ ಮಾಯವಾಗಿ  ತುಸು ನಗುತಿರಲು  ಅಂದು ಬೇರೊಂದು ಮನ ಸಂತೈಸಿದ ದಿನವ ನೆನೆದು  ಮತ್ತೆ ಕಣ್ಗಳು ತುಂಬಿರಲು  ದೂರಾದ ಮನವೇಕೆ ಮನವೇ  ಕೂಗಿ ಕರೆದರೂ ಕನಸಲೂ ಹಿಂದಿರುಗದ ಮನವ ನೆನೆದು  ಮನಕೆ ಮನವೇ ಸಂತೈಸಿರಲು  ಕಳೆದ ದಿನಗಳ ನೆನೆದು ಸಂತಸದಿಂದಿರು  ಲೋಕವೇ ಎದುರಾದರು  ಯಾರೇ ದೂರಾದರು  ಮನಕೆ ಮನವೇ ನೀ ಮರೆಯದಿರು..! Anu ....✍🏻❣️ Bengaluru. ************************************** ** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  974310474 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ಆಲಿಸು ನನ್ನಯ ಹುಚ್ಚುಗವನ...!

Image
ಆಲಿಸು ನನ್ನಯ ಹುಚ್ಚುಗವನ... ******************************************** ಪ್ರೀತಿ ಎಂದೊಡನೆ ನೆನೆಯುವೆ ನಿನ್ನ, ನೆನೆದೊಡನೆ ಮನಕೆ ಖುಷಿಯ ದಿಬ್ಬಣ... ಅರಿಯದೆ ಜಪಿಸುವೆ  ನಿನ್ನ ಹೆಸರನ್ನ, ಆ ಕನವರಿಕೆಗೆ ಕೊಡು ಒಂದು ವ್ಯಾಖ್ಯಾನ... ನಿನ್ನ ನೋಡಲು ನಾಚುವವು ನಯನ, ಉಳಿಯಲು ಸಾಧ್ಯವೇ ಇರದೆ ನಿನ್ನೆಡೆಗೆ ಗಮನ... ಊಹೆಗು ಮೀರಿದೆ ನನ್ನ ಕನಸಿನ ಪಯಣ, ಒಂದೊಮ್ಮೆ ಆಲಿಸು ನನ್ನಯ ಹುಚ್ಚುಗವನ... ಹೀಗೂ ಇರಬಹುದೆ ಪ್ರೀತಿಯ ಯಾನ?? ಸದ್ಯಕ್ಕೆ ಕಲ್ಪನೆಯಲ್ಲೇ ಇದು ಚೆನ್ನ!! ಹೀಗೆ ಕುಳಿತುಬಿಡಲೇ ಕಲ್ಪಿಸುತಲೇ ಎಲ್ಲವನ್ನ?? ✍️ಮೇಘ ಬೆಂಗಳೂರು. ****************************************** #Myunsungpoetry.blogspot.com# I Heartly welcome your suggestions. Please contact through, E-mail ID- Keerthankeeru2001@gmail.com Ph No. - 9743104743 𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌 𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠. 👇

ರೆಕ್ಕೆ ಬಡಿಯುತ್ತಿದೆ ಮನಸ್ಸು..!

Image

ಓ ನನ್ನ ಸೂರ್ಯ..!

Image
ಓ ನನ್ನ ಸೂರ್ಯ..! ************************************* ಮು ಸುಕು ಕವಿದಿರುವ ಮನಕೆ ನೀ ಬಂದೆ ಬೆಳಕಾಗಿ, ಹೊಳೆವ ನಿನ್ನಂದಕೆ ಬೆರಗಾದೆ ತಲೆಬಾಗಿ.. ಸುಡುವ ಶಾಖಕೆ ಅಂಜಿ ತುಸು ನಿನ್ನ ತೆಗಳುತ್ತ.. ತೆಗಳುತ್ತ..! ಆದರೆ ನೀ ಹಿಂತಿರುಗುವ ಮುಸ್ಸಂಜೆಯಲಿ ಕಂಡು ಆ ನಿನ್ನಂದ-ಚಂದ, ಕಳೆದೆ ಕಾಲವ,, ಗಳಿಸುತ ಖುಷಿಯ ಆಲಿಸುತ-ಆಲಿಸುತ ಹಕ್ಕಿಗಳ  ಘಾನವ, ನಿನ್ನ ಹೊಗಳುತ್ತ..ಹೋಗಳುತ್ತ..! ನಿನ್ನ ತೇಜಸ್ಸನ್ನು ಹೋಲುವರಾರಿಲ್ಲ ಜಗದಲ್ಲಿ, ನಿನ್ನ ಮುಂದೆ ತೃಣ ಮಾತ್ರ ನಾವಿಲ್ಲಿ...! ಸಕಲ ಜೀವ ಜಂತುಗಳಿಗೆ ನೀನೆ ಆಶ್ರಯ, ನಿನ್ನ ವಿಸ್ಮಯಕ್ಕೆ ಶರಣಾದೆ ಓ ನನ್ನ ಸೂರ್ಯ.. ಸೂರ್ಯ..! ✍️ಮೇಘ  ಬೆಂಗಳೂರು. *************************************** #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743

ನನ್ನವ್ವ.!

Image
ನನ್ನವ್ವ.! *********************************** ಕ ಣ್ಣಲ್ಲಿ ಕಣ್ಣಿರಿಸಿ ನನ್ನನ್ನು ಕಾಯ್ವವಳು ... ತುತ್ತಲ್ಲಿ ಮುತ್ತಿರಿಸಿ ಹಸಿವನ್ನು ಕಳೆವವಳು... ತುಸು ಕೋಪ ತೋರಿ ಕಣ್ಣಲ್ಲೇ ಬೈಯ್ವವಳು... ಮರುಕ್ಷಣವೇ ಮುದ್ದಾಡಿ  ಹುಸಿ ಮಾಡಿ ನಗಿಸುವಳು...  ಪ್ರೀತಿಗೆ ಮುನ್ನುಡಿಯ ಬರೆದವಳಿವಳು... ನೂರು ಸಾಲು ಗೀಚಿದರೂ ಬೆಲೆ ಕಟ್ಟದಂತಿರುವ ನನ್ನುಸಿರಿವಳು!! "ನನ್ನವ್ವ"... "ನನ್ನವ್ವ"... ✍️ಮೇಘ  ಬೆಂಗಳೂರು . ************************************ #Myunsungpoetry.blogspot.com# I Heartly welcome your suggestions. Please contact through, E-mail ID-  keerthankeeru2001@gmail.com Ph No.      -  9743104743