ಮಾಯದಲ್ಲಿ ಮಾಸುಹೋಗಿದೆ ಮನಸ್ಸು
ಮಾಯದಲ್ಲಿ ಮಾಸುಹೋಗಿದೆ ಮನಸ್ಸು
©All Rights reserved by Myunsungpoetry.blogspot.com
Ref no :- MUP/30112022/26
Ref no :- MUP/30112022/26
***************************************
ಬಾಣದಂತ ಸಮಯದ ನಡು ಸಿಲುಕಿ..
ಬಿರುಗಾಳಿಯಂತ ಕೆಡುಕು ಮಾತಿಗೆ ನಲುಕಿ..
ಜಗತ್ತಿನ್ನೆಲ್ಲ ಆಗೂ -ಹೋಗುಗಳ ಕಡೆ ಇಣುಕಿ..
ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!..
ಕಟಿಕರ ಕುಟೀರದಲ್ಲಿ ಸೇರಿ..
ಕಾಮಕ್ರೋಧದ ಬಲೆಯಲ್ಲಿ ತೂರಿ..
ಮೂಢನಂಬಿಕೆಯ ಜಾಲದಲ್ಲಿ ಜಾರಿ..
ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!..
ಲೋಕದ ಸರಿ-ತಪ್ಪುಗಳ ಹೆಗಲ ಮೇಲೇರಿ..
ಪ್ರೇಮಲೋಕವ ದಿನವು ನೆನೆದು ನೂರು ಬಾರಿ..
ಮರೆತು ತನ್ನ ಜೀವನದ ಸಾಧನೆಯ ದಾರಿ..
ಮಾಯದಲ್ಲಿ ಮಾಸುಹೋಗಿದೆ ಮನಸ್ಸು..!..
ಆದರೂ ಎಲ್ಲೋ..........
ಭರವಸೆಯ ಕಿರಣ ಮನಸಲಿ ತೂರಿ..
ಗೆಲ್ಲುವ ಹಾದಿ ಹಿಡಿದಿದೆ ಗುರಿಯ ಕೋರಿ..
ಚಾಟಿಬೀಸುತ ಪಂಚೆದ್ರೀಯಗಳ ರಥವನ್ನೇರಿ..
ಕನಸಿನ ಕೋಟೆ ತಲುಪಲೊಂದೆ ಜೀವನವೆಂದು ತೋರಿ.!.
ಮಾಯದಲ್ಲಿ ಮಾಸು ಹೋಗಿದ್ದ ಮನಸ್ಸು ಇಂದು ..!
✍️ಕೀ.ಕೆ
ಬೆಂಗಳೂರು
***************************************
Please contact through,
E-mail- keerthankeeru2001@gmail.com
Ph No.- 9743104743


Comments