ಓ ಮನದ ರಾಜನೇ..!

ಓ ಮನದ ರಾಜನೇ..!

©All Rights reserved by Myunsungpoetry.blogspot.com
Ref no :- MUP/08122022/27
****************************************

ಮೆಲ್ಲನೆ ಸೂರ್ಯ ಮರೆಯಾಗಿರಲು
ಹರುಷದಲ್ಲಿ ಚಂದ್ರ ತೇಲಿ ಬರುತಿರಲು
ನಿನ್ನ ನೆನಪು ಮನದಲ್ಲಿ ಮಂದಹಾಸ ತಂದಿರಲು 
ನಿನ್ನನ್ನು ಹೃದಯದ ಗೋಪುರದಲ್ಲಿ ಪೂಜಿಸಿ ಆರಾಧಿಸುತ್ತಿರುವೆ 
ನಲ್ಮೆಯ ನಲ್ಲನೆ 
ಕಾಡುತಿರುವೆ ನೀ ಏಕೆ ಕನಸಲೇ ಬಂದು 
ಈ ಕಣ್ಣುಗಳಿಗೆ ದರುಶನ ನೀಡುವೆಯ
ಪ್ರೀತಿಯ ದಾರಿ ತೋರುವೆಯಾ ಈ ಒಂಟಿತನದ ಪಯಣಕ್ಕೆ 
ಸಾಗುವೆ ಜೊತೆ ಜೊತೆಯಲ್ಲೇ
ಓ ಮನದ ರಾಜನೇ

ನಿಷ್ಕಲ್ಮಶ ಮನಸ್ಸಿನ ಒಡೆಯನೇ 
ಕನಸಲೇ ಬಂದು ಕನಸಲ್ಲೇ ಆಗುವೆ ಮಾಯ
ಹೇ ಪ್ರಿಯ ಸಖನೇ 
ಜೀವ ತುಂಬುವೆಯ 
ಈ ಕಲ್ಪನೆಯ ಪ್ರೀತಿಗೆ 
ನಗುತಲೆ ಕೇಳುವೆ ನಾ
ನೀ ಯಾರೆಂದು ತಿಳಿಸುವೆಯಾ ?
ನನ್ನೀ ಮುಗ್ದ ಮನಸ್ಸಿಗೆ
ಒಮ್ಮೆ ತಿಳಿಸಿದರೆ 
ನೀ ಬರುವ ದಾರಿಯಲ್ಲಿ 
ಪ್ರೀತಿಯ ಹೂಗಳ ಚೆಲ್ಲಿ 
ಸ್ವಾಗತಿಸುವೆ ನನ್ನೀ ಹೃದಯದ ಅರಮನೆಗೆ....🥰

Anu ....✍🏻❣️
Bengaluru.






****************************************
I Heartly welcome your suggestions.
Please contact through,
E-mail ID- keerthankeeru2001@gmail.com
Ph No.      - 9743104743
#Myunsungpoetry.blogspot.com#

𝙸𝚏 𝚢𝚘𝚞 𝚕𝚒𝚔𝚎 𝚝𝚑𝚒𝚜 𝚙𝚘𝚎𝚝𝚛𝚢.... 🙌

🙌

𝚂𝚑𝚊𝚛𝚎 & 𝙲𝚘𝚖𝚖𝚎𝚗𝚝 𝙽𝚘𝚠.

👇

Comments

Anonymous said…
Nicely written Anupama

Popular posts from this blog

ಪ್ರೇರಣೆ ನೀನೆ ನನ್ನೊಳಗೆ.!

ನೀ ಮುಡಿದ ಮಲ್ಲಿಗೆ..!

ಮಂಕಾದ ಮನಸ್ಸು...!

ನೆಚ್ಚಿನ ಗುರು

ನಗುತ್ತಲೆ ಕುಣಿವೆನು ನಾನು..! ನೀನಿರದೆ ನಾ ಉಳಿವೇನೇನು..?

ನೆನೆದು ನಿನ್ನ ನೆನೆದು.!

ಆಲಿಸು ನನ್ನಯ ಹುಚ್ಚುಗವನ...!

ತಂಗಿಯ ಬಣ್ಣನೆ.!

ಮಾಯದಲ್ಲಿ ಮಾಸುಹೋಗಿದೆ ಮನಸ್ಸು

It's illusion..!