ನೀ ಮುಡಿದ ಮಲ್ಲಿಗೆ..!
ನೀ ಮುಡಿದ ಮಲ್ಲಿಗೆ..!
©All Rights reserved by Myunsungpoetry.blogspot.com
Ref no :- MUP/24122022/28
Ref no :- MUP/24122022/28
***************************************
ಬೋರ್ಗರೆವ ಆ ತೀರದ ಕಡೆಗೆ,
ಕಗ್ಗತ್ತಲ ಮಿನುಗುವ ತಾರೆಗಳ ಬಳಿಗೆ,
ಏಕಾಂತದಿ ಚಂದಿರನಿರುವ ಮುಗಿಲಿಗೆ,
ನಿನ್ನ ಕರೆದೋಗುವಾಸೆ ಈ ಮನಸಿಗೆ,
ನೋಡಿ ನೀ ಮುಡಿದ ಮಲ್ಲಿಗೆ..!
ಒಂಟಿತನದಿ ಮುಳಿಗಿದ್ದೀ ಬಾಳಿಗೆ,
ಜೊತೆಯಾಗುವೆಯೆಂದು ಈ ತೊಳಿಗೆ,
ಮನಸ್ಸು-ಕನಸಲಿ ನೀಡಿದೆ ನಿನಗೆ ಸಲುಗೆ,
ಬರೆವ ಪದಗಳು ಕರೆದೋಯುತ್ತಿದೆ ನಿನ್ನ ಬಳಿಗೆ,
ನೋಡಿ ನೀ ಮುಡಿದ ಮಲ್ಲಿಗೆ..!
ನಿನ್ನನ್ನೇ ಜಪಿಸುತ್ತಿರುವೆ ಪ್ರತಿಗಳಿಗೆ,
ನೀ ನುಡಿದ ಪದಗಳೆ ಮೆಟ್ಟಿಲುಗಳು ಈ ಸಾಲಿಗೆ,
ನಿನ್ನ ಗೆಜ್ಜೆ ನಾದವೆ ತಾಳ ಈ ಕವಿತೆಗೆ,
ಒಮ್ಮೆ ನೀಡುವೆಯ ತಬ್ಬಿಮುದ್ದಾಡಲು ಸಲುಗೆ,
ಬಾಡುವ ಮೊದಲು ನೀ ಮುಡಿದ ಮಲ್ಲಿಗೆ..?
✍️ಕೀ.ಕೆ
ಬೆಂಗಳೂರು
***************************************
Please contact through,
E-mail- keerthankeeru2001@gmail.com
Ph No.- 9743104743


Comments